ಓಲೈಕೆ ರಾಜಕಾರಣವೇ ಸುಭಾಷ ಶೆಟ್ಟಿ ಹತ್ಯೆಗೆ ಕಾರಣ

Mahesh Tenginakayi
Published on

ಹುಬ್ಬಳ್ಳಿ : ಮಂಗಳೂರಿನಲ್ಲಿ ನಡೆದ ಬಜರಂಗ ದಳದ ಮುಖಂಡ ಸುಹಾಸ ಶೆಟ್ಟಿಯ ಹತ್ಯೆಗೆ ಕಾಂಗ್ರೆಸ್ ಸರ್ಕಾರದ ತುಷ್ಟೀಕರಣ ನೀತಿಯೇ ಕಾರಣವೆಂದು ಶಾಸಕ ಮಹೇಶ ಟೆಂಗಿನಕಾಯಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಹಿಂದು ಕಾರ್ಯಕರ್ತರ ಮೇಲೆ ಹಲ್ಲೆ ಹಾಗೂ ಹತ್ಯೆಗಳೂ ನಡೆಯುತ್ತಲೇ ಇವೆ ಎಂದು ದೂರಿದ್ದಾರೆ.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವದಲ್ಲಿ ಇದ್ದ ಕಾರಣ ಪಿಎಫ್​ಐ, ಎಸ್​ಡಿಪಿಐಗಳಂತಹ ದೇಶ ವಿರೋಧಿ ಸಂಘಟನೆಗಳು ಮತ್ತೆ ಚಲಾವಣೆಯಲ್ಲಿ ಬಂದಿವೆ. ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ರಾಷ್ಟ್ರ ವಿರೋಧಿಗಳಿಗೆ ಯಾವುದೇ ಭಯ ಇಲ್ಲದಂತಾಗಿದೆ. ಮಂಗಳೂರಿನಲ್ಲಿ ಈ ಹಿಂದೆ ನಡೆದ ಹಿಂದು ಕಾರ್ಯಕರ್ತ ಪ್ರವೀಣ ನೆಟ್ಟಾರು ಹತ್ಯೆಯ ಪ್ರಕರಣದ ತನಿಖೆ ಇನ್ನೂ ನಡೆಯುತ್ತಿರುವಾಗಲೇ ಮತ್ತೊಬ್ಬ ಹಿಂದು ಕಾರ್ಯಕರ್ತನ ಹತ್ಯೆಯಾಗಿರುವುದು ವಿಪರ್ಯುಸದ ಸಂಗತಿ. ಆರೋಪಿಗಳನ್ನು ಈ ಕೂಡಲೇ ಬಂಧಿಸಬೇಕು ಎಂದು ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net