ಕಾಂಗ್ರೆಸ್‌ನಿಂದ ತುಷ್ಠೀಕರಣ ರಾಜಕಾರಣ: ಯಡಿಯೂರಪ್ಪ

ex cm B.S.Yediyurappa
ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ
Published on

ಶಿವಮೊಗ್ಗ: ಪಿಎಫ್‌ಐ ಜತೆ ಹೊಂದಾಣಿಕೆ ಮಾಡಿಕೊಂಡಿರುವ ಕಾಂಗ್ರೆಸ್ ರಾಜ್ಯದಲ್ಲಿ ತುಷ್ಠಿಕರಣದ ರಾಜಕಾರಣ ಮಾಡುತ್ತಿದೆ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಎಂದು ದೂರಿದರು.

ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದ್ದು ಆತಂಕ ಮೂಡಿಸುತ್ತಿದೆ. ಸಿಎಂ ಸುಳ್ಳಿನ ಭಾಷಣ ಮಾಡುತ್ತಾ ಜನರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಕಾಂಗ್ರೆಸ್ ಅಂಬೇಡ್ಕರ್ ವಿರೋಧಿ ರಾಜಕಾರಣ ಮಾಡುತ್ತಿದೆ. ಎಸ್ಸಿ ಎಸ್ಟಿಗಳ ಮೇಲೆ ಮೀಸಲಾತಿ ತೂಗುಗತ್ತಿ ಹಾಕಿದ್ದು ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ಹಿಂದುಳಿದವರ ಬದುಕು ದುಸ್ತರ ಆಗಲಿದೆ. ಹಿಂದುಳಿದವರು ಮತ್ತು ದಲಿತರ ಮೀಸಲಾತಿ ಹಕ್ಕು ಕಿತ್ತುಕೊಂಡು ಮುಸ್ಲಿಮರಿಗೆ ನೀಡಲು ಹೊರಟಿದೆ ಎಂದರು.
ಕರ್ನಾಟಕದಲ್ಲಿ ಬರಗಾಲವಿದ್ದರೂ ರೈತರ ಪರ ಕಾಳಜಿ ಇಲ್ಲ. ಬರ ಪರಿಹಾರ ವಿತರಣೆ ಸಮರ್ಪಕವಾಗಿ ನಡೆದಿಲ್ಲ. ಎಸ್ಸಿ ಎಸ್ಟಿ ಸಮಾಜಕ್ಕೆ ಮೀಸಲಿಟ್ಟಿ 25,398 ಕೋಟಿ ರೂ. ಅನುದಾನವನ್ನು ಕಾಂಗ್ರೆಸ್ ಸರ್ಕಾರ ಗ್ಯಾರಂಟಿಗಳಿಗೆ ಬಳಕೆ ಮಾಡಿಕೊಂಡಿದ್ದು ಮುಂದೆ ಅಧಿಕಾರದ ಚುಕ್ಕಾಣೆ ಹಿಡಿಯುವ ಮೂಲಕ 4ಜಿ ಸ್ಕಾೃಮ್‌ನಂತೆ ಕೋಟಿ ಕೋಟಿ ಸ್ಕಾೃಮ್‌ಗಳನ್ನು ಮಾಡಲು ಸಂಚು ಹಾಕಿದೆ ಎಂದು ಆರೋಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net