ರಾಜ್ಯ ಸರ್ಕಾರದಿಂದ ಮುಸ್ಲಿಮರ ತುಷ್ಟೀಕರಣ

bjp mlc n.ravikumar
Published on

ಶಿವಮೊಗ್ಗ: ಗಣಪತಿ ಹಬ್ಬ ದೇಶದ ರಾಷ್ಟ್ರೀಯ ಉತ್ಸವ. ಆದರೆ ಮುಸ್ಲಿಮರನ್ನು ತುಷ್ಟೀಕರಿಸುವ ಸಲುವಾಗಿ ರಾಜ್ಯ ಸರ್ಕಾರ ಗಣೇಶ ಚತುರ್ಥಿಗೆ ನಿರಂತರ ವಿಘ್ನ ತಂದೊಡ್ಡಿದೆ ಎಂದು ವಿಧಾನ ಪರಿಷತ್ ಮುಖ್ಯ ಸಚೇತನ ಎನ್.ರವಿಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.

ಗಣಪತಿ ಮೂರ್ತಿ ಪ್ರತಿಷ್ಠಾಪನೆಯಿಂದ ಹಿಡಿದು ಪೂಜೆ ಪುನಸ್ಕಾರ, ವಿಸರ್ಜನೆ ಎಲ್ಲದಕ್ಕೂ ಸರ್ಕಾರ ಕಠಿಣ ನಿಯಮಗಳನ್ನು ವಿಧಿಸಿ ನಿರ್ಬಂಧಿಸಲು ಮುಂದಾಗಿದೆ. ಅದರ ಪರಿಣಾಮ ಕೆಲ ಕಿಡಿಗೇಡಿ ಮುಸ್ಲಿಮರು ಗಣಪತಿ ಮೆರವಣಿಗೆ ವೇಳೆ ಕೃತ್ಯಗಳನ್ನು ಎಸಗುತ್ತಿದ್ದಾರೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಮಂಡ್ಯ ಜಿಲ್ಲೆ ಮದ್ದೂರಿನಲ್ಲಿ ನಡೆದಿರುವುದು ಪೂರ್ವಯೋಜಿತ ಕೃತ್ಯವಾಗಿದೆ. ಮಸೀದಿಯಲ್ಲಿ ದೊಡ್ಡ ದೊಡ್ಡ ಕಲ್ಲು, ದೊಣ್ಣೆಗಳನ್ನು ದಾಸ್ತಾನು ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ವಿದ್ಯುತ್ ಸಂಪರ್ಕ ಕಡಿತಗೊಳಿಸಿ ಕಲ್ಲು ತೂರಾಟ ಮಾಡಲಾಗಿದೆ. ಕಲ್ಲು ಹೊಡೆದಿರುವುದು ತಪ್ಪೆಂದು ಅನೇಕ ಮುಸ್ಲಿಮರು ಪ್ರಮಾದ ಒಪ್ಪಿಕೊಂಡಿದ್ದಾರೆ ಎಂದರು.

ಸರ್ಕಾರ ಕಿಡಿಗೇಡಿಗಳಿಗೆ ಬೆಂಬಲ ನೀಡುತ್ತಿದ್ದು, ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಗಲಭೆಗೆೆ ಬಿಜೆಪಿ ಕಾರಣ ಎಂದು ಹೇಳುತ್ತಿದ್ದಾರೆ. ಬೆಂಗಳೂರಿನ ಕೆ.ಜೆ.ಹಳ್ಳಿ, ಡಿ.ಜೆ.ಹಳ್ಳಿಯಲ್ಲಿ ಗಲಭೆ ನಡೆಸಿದವರ ಮೇಲಿನ ಕೇಸು ಹಿಂಪಡೆಯಲಾಗಿದೆ. ಹಸುವಿನ ಕೆಚ್ಚಲು ಕೊಯ್ದವರು, ಗೋಹತ್ಯೆ ಮಾಡಿದವರ ಮೇಲಿನ ಕೇಸು ತೆಗೆದು ಹಾಕಿ ಗಲಭೆಗೆ ಮತ್ತಷ್ಟು ಪ್ರಚೋದನೆ ನೀಡುತ್ತಿದೆ ಎಂದು ದೂರಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಕೆ.ಜಗದೀಶ್, ಪ್ರಮುಖರಾದ ಎಂ.ಬಿ.ಹರಿಕೃಷ್ಣ, ಸಿದ್ದಲಿಂಗಪ್ಪ, ಮಾಲತೇಶ್, ಕುಪ್ಪೇಂದ್ರ ಆಯನೂರು, ಸುಧಾಕರ್, ಮಂಗಳಾ, ನಿವೇದಿತಾ ರಾಜ್, ಶಿವರಾಜ್, ಕೆ.ವಿ.ಅಣ್ಣಪ್ಪ ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net