

ಹುಮನಾಬಾದ್: ಪ್ರತಿನಿತ್ಯ ಪಟ್ಟಣಕ್ಕೆ ವಿದ್ಯಾಭ್ಯಾಸಕ್ಕೆ ಆಗಮಿಸುವ ತಾಲೂಕಿನ ಸೋನಾಕೇರಾ ಗ್ರಾಮದ ಶಾಲಾ ಕಾಲೇಜು ವಿದ್ಯಾರ್ಥಿಗಳು ಬಸ್ಸಿನ ಸಮಸ್ಯೆಯಾದ ಹಿನ್ನೆಲೆಯಲ್ಲಿ ಬುಧವಾರ ಸಂಜೆ ಇಲ್ಲಿನ ಶಾಸಕರ ನಿವಾಸಕ್ಕೆ ಆಗಮಿಸಿ ಸಮಸ್ಯೆ ತೋಡಿಕೊಂಡರು.
ಹಲವಾರು ವಿದ್ಯಾರ್ಥಿ, ವಿದ್ಯಾರ್ಥಿನಿಯರು ಶಾಸಕ ಡಾ. ಸಿದ್ದಲಿಂಗಪ್ಪ ಪಾಟೀಲರಿಗೆ ಭೇಟಿ ಮಾಡಿ ನಮಗೆ ಪ್ರತಿನಿತ್ಯ ಬಸ್ಸಿನ ಸಮಸ್ಯೆಯಾಗುತ್ತಿದೆ. ಬಸ್ ನಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದ್ದು, ಸಮಯಕ್ಕೆ ಸರಿಯಾಗಿ ಹೆಚ್ಚಿನ ಬಸ್ ವ್ಯವಸ್ಥೆ ಕಲ್ಪಿಸುವಂತೆ ಮನವಿ ಮಾಡಿದರು. ಈ ಸಂದರ್ಭದಲ್ಲಿ ಶಾಸಕರು ಇಲ್ಲಿನ ಬಸ್ ಡಿಪೋ ಘಟಕ ವ್ಯವಾಸ್ಥಪಕ ವಿಠಲರಾವ ಕದಮ್ ಅವರನ್ನು ಸ್ಥಳಕೆ ಕರೆಸಿ, ವಿದ್ಯಾರ್ಥಿಗಳ ಸಮ್ಮುಖದಲ್ಲಿಯೇ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಬಸ್ ಸಮಸ್ಯೆ ಆಗದಂತೆ ತಕ್ಷಣ ಬಗೆಹರಿಸಿ. ಮೇಲಾಧಿಕಾರಿ ಗಮನಕ್ಕೆ ತಂದು ಇನ್ನು ಹೆಚ್ಚಿನ ಬಸ್ಸಿನ ವ್ಯವಸ್ಥೆ ಕಲ್ಪಿಸಲು ಸೂಚಿಸಿದರು. ಪುರಸಭೆ ಸದಸ್ಯ ಸುನೀಲ ಪಾಟೀಲ್, ಪ್ರಮುಖರಾದ ಗಿರೀಶ ತುಂಬಾ, ವೈಜಿನಾಥ ಪಾಟೀಲ್ ಸೇರಿದಂತೆ ಇತರ ಪ್ರಮುಖರು, ವಿದ್ಯಾರ್ಥಿಗಳು ಇದ್ದರು.