ಬಾಲಕಿ ಪಾಲಕರ ಪತ್ತೆಗೆ ಮನವಿ

ಬಾಲಕಿ ಪಾಲಕರ ಪತ್ತೆಗೆ ಮನವಿ
Published on

ಗುಂಡ್ಲುಪೇಟೆ: ಪಟ್ಟಣದ ಬೇಕರಿಯೊಂದರ ಬಳಿ ಅನಾಥವಾಗಿ ನಿಂತಿದ್ದ ಬಾಲಕಿಯನ್ನು ಸಾರ್ವಜನಿಕರು ಪೊಲೀಸರ ವಶಕ್ಕೆ ನೀಡಿದ್ದು, ಪಾಲಕರ ಪತ್ತೆಗೆ ಮನವಿ ಮಾಡಿದ್ದಾರೆ.

ಸೋಮವಾರ ಮಧ್ಯಾಹ್ನ ಸುಮಾರು 5 ವರ್ಷ ವಯಸ್ಸಿನ ಸಿರಿಸ್ತಿ ಅನಾಥವಾಗಿ ನಿಂತಿದ್ದನ್ನು ಗಮಿಸಿದ ಸಾರ್ವಜನಿಕರು ಆಕೆಯನ್ನು ಪಟ್ಟಣದ ಪೊಲೀಸರ ವಶಕ್ಕೆ ನೀಡಿದ್ದಾರೆ. ಬಿಹಾರ ಮೂಲದ ಇವರ ತಂದೆ ಗೋಪಾಲ ಹಾಗೂ ತಾಯಿ ಪೂಲಕುಮಾರಿ ಇಟ್ಟಿಗೆ ತಯಾರಿಸುತ್ತಿದ್ದರು ಎಂದು ಬಾಲಕಿ ಹೇಳುತ್ತಿದ್ದಾಳೆ. ಅನಾಥ ಮಗುವನ್ನು ಚಾಮರಾಜನಗರದ ಬಾಲ ಮಂದಿರಕ್ಕೆ ಕಳಿಸಲಾಗಿದ್ದು, ಪಾಲಕರು ಪತ್ತೆಯಾದರೆ ಪೊಲೀಸರಿಗೆ ತಿಳಿಸುವಂತೆ ಸರ್ಕಲ್ ಇನ್ಸ್‌ಪೆಕ್ಟರ್ ಪರಶಿವಮೂರ್ತಿ ಕೋರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net