ನ್ಯಾಯವಾದಿಗಳ ಹಲ್ಲೆ ಖಂಡಿಸಿ ಜಿಲ್ಲಾಧಿಕಾರಿಗೆ ಮನವಿ

Appeal to the District Collector condemning the attack on lawyers
ನ್ಯಾಯವಾದಿಗಳ ಸಂಘದ ಸದಸ್ಯರ ಮೇಲಿನ ಹಲ್ಲೆ ಖಂಡಿಸಿ ವಿಜಯಪುರದಲ್ಲಿ ಜಿಲ್ಲಾ ನ್ಯಾಯವಾದಿಗಳ ಸಂಘದ ವತಿಯಿಂದ ಜಿಲ್ಲಾಧಿಕಾರಿ ಟಿ. ಭೂಬಾಲನ್ ಅವರಿಗೆ ಮನವಿ ಸಲ್ಲಿಸಲಾಯಿತು. ಧರೆಪ್ಪಗೌಡ ಬಿರಾದಾರ, ಸುನೀಲ ಬಿರಾದಾರ, ಸುರೇಶ ಚೂರಿ ಮತ್ತಿತರರಿದ್ದಾರೆ.
Published on

ವಿಜಯಪುರ : ನ್ಯಾಯವಾದಿಗಳ ಸಂಘದ ಸದಸ್ಯ ಈರಣ್ಣ ವಡವಡತಿ ಅವರ ಮೇಲಿನ ಹಲ್ಲೆ ಖಂಡಿಸಿ ಜಿಲ್ಲಾ ನ್ಯಾಯವಾದಿಗಳ ಸಂಘದ ವತಿಯಿಂದ  ಜಿಲ್ಲಾಧಿಕಾರಿ ಟಿ. ಭೂಬಾಲನ್ ಅವರಿಗೆ ಮನವಿ ಸಲ್ಲಿಸಲಾಯಿತು.

ಬಸವನಬಾಗೇವಾಡಿ ನ್ಯಾಯವಾದಿಗಳ ಸಂಘದ ಸದಸ್ಯ ಈರಣ್ಣ ವಡವಡತಿ ಅವರ ಮೇಲೆ ಮಂಗಳವಾರ ಕೊಲೆಗೆ ಯತ್ನಿಸಿ ಮಾರಣಾಂತಿಕ ಹಲ್ಲೆ ನಡೆದಿದ್ದು, ಈ ಘಟನೆ ಖಂಡಿಸಿ ನ್ಯಾಯವಾದಿಗಳ ಸಂಘವು ನ್ಯಾಯಾಲಯ ಕಾರ್ಯಕಲಾಪ ಹಾಗೂ ಕಂದಾಯ ಇಲಾಖೆಯ ಎಲ್ಲ ನ್ಯಾಯಾಲಯದ ಕಾರ್ಯಕಲಾಪದಿಂದ ದೂರ ಉಳಿದು ಹಲ್ಲೆಯನ್ನು ಖಂಡಿಸಿದರು. ಅಲ್ಲದೆ, ಹಲ್ಲೆ ಮಾಡಿದವರನ್ನು ಕೂಡಲೇ ಬಂಧಿಸಿ ಅವರ ಮೇಲೆ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ಜಿಲ್ಲಾ ನ್ಯಾಯವಾದಿಗಳ ಸಂಘ ಅಧ್ಯಕ್ಷ ಧರೆಪ್ಪಗೌಡ ಬಿರಾದಾರ, ಉಪಾಧ್ಯಕ್ಷ ಸುನೀಲ ಬಿರಾದಾರ, ಪ್ರಧಾನ ಕಾರ್ಯದರ್ಶಿ ಸುರೇಶ ಚೂರಿ, ಸದಸ್ಯರಾದ ಎಂ.ಎ. ಕಾಖಂಡಕಿ, ಯು.ಎಂ. ಆಲಗೂರ, ವೈ.ಬಿ. ಬಡಿಗೇರ, ಬಿ.ಡಿ. ಬಿರಾದಾರ, ವಿ.ಎಚ್. ಗಾಲಪ್ಪಗೋಳ, ಎಂ.ಆರ್. ಹವಾಲದಾರ, ಪಿ.ಕೆ. ಹುವನಗೊಲ, ಎಂ.ಎಸ್. ಇನಾಮದಾರ, ಎಸ್.ಎ. ಆಸಂಗಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net