ತಾಳಿಕೋಟೆ ಪುರಸಭೆ ಮುಖ್ಯಾಧಿಕಾರಿಗೆ ಮನವಿ

Appeal to Talikot Municipal Chief Officer
ತಾಳಿಕೋಟೆ ಪಟ್ಟಣದಲ್ಲಿ ಪುರಸಭೆಯಿಂದ ಮೂಲ ಸೌಲಭ್ಯಗಳನ್ನು ಸರಿಪಡಿಸುವಂತೆ ಒತ್ತಾಯಿಸಿ ಜನ ಸೇವಾ ಸಂಘದಿಂದ ಮುಖ್ಯಾಧಿಕಾರಿ ಉದಯಕುಮಾರ ಘಟಕಾಂಬಳೆ ಅವರಿಗೆ ಮನವಿ ಸಲ್ಲಿಸಲಾಯಿತು. ಅಮೀತಸಿಂಗ್ ಮನಗೂಳಿ, ನಿತಿನ ಹಜೇರಿ, ಬಸವರಾಜ ಮಂಗ್ಯಾಳ, ಮುತ್ತು ಬುಡ್ಡರ ಇತರರಿದ್ದರು.
Published on

ತಾಳಿಕೋಟೆ: ಪಟ್ಟಣದ ಪುರಸಭೆ ವತಿಯಿಂದ ಸಾರ್ವಜನಿಕರ ಕೆಲಸ ಕಾರ್ಯಗಳಲ್ಲಿ ವಿಳಂಬವಾಗುವ ಜೊತೆಗೆ ಮೂಲ ಸೌಲಭ್ಯಗಳು ಸಿಗುತ್ತಿಲ್ಲ. ಕೂಡಲೇ ಸಮಸ್ಯೆ ಸರಿಪಡಿಸಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಿಕೊಡಬೇಕು ಎಂದು ಜನ ಸೇವಾ ಸಂಘದ ಪದಾಧಿಕಾರಿಗಳು, ಸದಸ್ಯರು ಗುರುವಾರ ಪುರಸಭೆ ಮುಖ್ಯಾಧಿಕಾರಿಗೆ ಮನವಿ ಸಲ್ಲಿಸಿದರು.

ಸಾರ್ವಜನಿಕ ರಸ್ತೆಗಳು, ಚರಂಡಿಗಳ ಸ್ವಚ್ಛತೆ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿದ್ದಾರೆ. ನಗರದಲ್ಲಿ ಸರಿಯಾಗಿ ಬೀದಿ ದೀಪಗಳ ನಿರ್ವಹಣೆ ಆಗುತ್ತಿಲ್ಲ. ಕೂಡಲೇ ಸೂಕ್ತ ಕ್ರಮ ಕೈಗೊಳ್ಳಬೇಕು. ಪುರಸಭೆ ಕಾರ್ಯಾಲಯದಲ್ಲಿ ಸರ್ಕಾರದಿಂದ ನೇಮಕಗೊಂಡ ಸಿಬ್ಬಂದಿ ಹೆಸರು ಮತ್ತು ಪದನಾಮಗಳು ಹಾಗೂ ತಾತ್ಕಾಲಿಕವಾಗಿ ನೇಮಕಗೊಂಡ ಸಿಬ್ಬಂದಿ ಹೆಸರು ಮತ್ತು ಪದನಾಮಗಳನ್ನು ಅವರ ಟೇಬಲ್‌ಗಳಲ್ಲಿ ಲಕಗಳಿಗೆ ಹಚ್ಚಬೇಕು.

ಬಿನ್ ಶೆತ್ನಿಯಾದ ಪ್ಲಾಟ್‌ಗಳ ಉತಾರದ ಪಿಐಡಿ ನಂಬರ್ ಬಂದರೂ ಸಹ ಸಾರ್ವಜನಿಕರಿಗೆ ತಿಂಗಳಾನುಗಟ್ಟಲೇ ಅಲೆದಾಡಿಸುತ್ತಿರುವುದು ಕಂಡು ಬಂದಿರುತ್ತದೆ. ಈ ಬಗ್ಗೆ ಸಿಬ್ಬಂದಿಗೆ ಪ್ರಶ್ನೆ ಮಾಡಿದರೆ ಸರ್ವರ್ ಇಲ್ಲ ಎಂದು ಬೇಜವಾಬ್ದಾರಿ ಹೇಳಿಕೆ ನೀಡಿ ಜನರನ್ನು ಅಲೆದಾಡಿಸುತ್ತಿಸಲಾಗುತ್ತಿದೆ. ಅಲ್ಲದೆ ಸಿಬ್ಬಂದಿ ಕೊರತೆ ಇದೆ ಎಂದು ಕಾರಣ ಹೇಳುತ್ತಿರುತ್ತಾರೆ.

ಈ ಸಮಸ್ಯೆಗಳು ಬಗೆಹರಿಯದಿದ್ದರೆ ಜನ ಸೇವಾ ಸಂಘದ ವತಿಯಿಂದ ಹಾಗೂ ತಾಳಿಕೋಟೆ ಪಟ್ಟಣದ ನಾಗರಿಕರ ಸಹಕಾರದೊಂದಿಗೆ ಪುರಸಭೆ ಕಾರ್ಯಾಲಯಕ್ಕೆ ಬೀಗ ಜಡಿದು ಪ್ರತಿಭಟನೆ ಮಾಡಲಾಗುತ್ತದೆ ಎಂದು ಮನವಿ ಪತ್ರದಲ್ಲಿ ಎಚ್ಚರಿಸಲಾಗಿದೆ.

ಜನ ಸೇವಾ ಸಂಘದ ಅಧ್ಯಕ್ಷ ಅಮೀತಸಿಂಗ್ ಮನಗೂಳಿ ನೇತೃತ್ವದಲ್ಲಿ ಪುರಸಭೆ ಮುಖ್ಯಾಧಿಕಾರಿ ಉದಯಕುಮಾರ ಘಟಕಾಂಬಳೆ ಅವರಿಗೆ ಸಲ್ಲಿಸಲಾಯಿತು.

ನೀತಿನ ಹಜೇರಿ, ವಿಠ್ಠಲ ಹಜೇರಿ, ವಿಶ್ವನಾಥ ಹಜೇರಿ, ರಾಜು ಹಜೇರಿ, ಬಸವರಾಜ ಮಂಗ್ಯಾಳ, ಮುತ್ತು ಬುಡ್ಡರ, ರಫಿಕ್ ಲಾಹೋರಿ, ಆರ್ೀ ರಾಯಚೂರ, ಪ್ರಭು ಗೌಡಗೇರಿ, ರಮೇಶ ವರದಪ್ಪನವರ, ಹನುಮಾನಸಿಂಗ್ ದೇವಿ, ಮಲ್ಲಿಕಾರ್ಜುನ ಹಿಪ್ಪರಗಿ, ಇಮಾಮಹುಸೇನ ಚೋರಗಸ್ತಿ, ಸಂತೋಷ ಹಜೇರಿ, ಸೂರಜ್ ಹಜೇರಿ, ಡಿ.ಆರ್. ಲೋಕರೆ, ಎನ್.ಎಂ. ಮೇಟಿ, ಹುಸೇನ ಉಸ್ತಾದ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net