ರೈತರ ಕಬ್ಬಿನ ಬಾಕಿ ಹಣ ಪಾವತಿಗೆ ಆಗ್ರಹಿಸಿ ಸಕ್ಕರೆ ಸಚಿವರಿಗೆ ಮನವಿ

RAITA SANGHA
ವಿಜಯಪುರ ಜಿಪಂ ಆವರಣದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು. ರಾಹುಲ್ ಕುಬಕಡ್ಡಿ, ಸಂಗಮೇಶ ಸಗರ, ರಾಮಗೌಡ ಪಾಟೀಲ ಮತ್ತಿತರರಿದ್ದಾರೆ.
Published on

ವಿಜಯಪುರ: ರೈತರ ಕಬ್ಬಿನ ಬಾಕಿ ಹಣ ಪಾವತಿಗೆ ಆಗ್ರಹಿಸಿ ಸಕ್ಕರೆ ಮತ್ತು ಜವಳಿ ಸಚಿವ ಶಿವಾನಂದ ಪಾಟೀಲಗೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಪದಾಧಿಕಾರಿಗಳು ಮನವಿ ಸಲ್ಲಿಸಿದರು.

ಶುಕ್ರವಾರ ನಗರದ ಜಿಪಂ ಆವರಣದಲ್ಲಿ ಕೆಲಕಾಲ ಪ್ರತಿಭಟನೆ ನಡೆಸಿದ ರೈತರು ಕಾರ್ಖಾನೆಗಳ ವಿರುದ್ಧ ಘೋಷಣೆ ಕೂಗಿದರು. ಬಳಿಕ ಸ್ಥಳಕ್ಕೆ ಆಗಮಿಸಿದ ಸಚಿವರಿಗೆ ಮನವಿ ಸಲ್ಲಿಸಿದರು.

ಜಿಲ್ಲೆಯ 11 ಸಕ್ಕರೆ ಕಾರ್ಖಾನೆಗಳು ಡಿಸೆಂಬರ್‌ನಿಂದ ಈವರೆಗೆ ಕಬ್ಬಿನ ಬಿಲ್ ಪಾವತಿಸಿಲ್ಲ. ಮುಂಗಾರು ವಿಳಂಬದಿಂದಾಗಿ ರೈತರು ಈಗಾಗಲೇ ಸಂಕಷ್ಟದಲ್ಲಿದ್ದಾರೆ. ಬಿತ್ತನೆ ಬೀಜ ಹಾಗೂ ರಸಗೊಬ್ಬರ ಖರೀದಿಗೆ ಹಣವಿಲ್ಲದಂತಾಗಿದೆ. ಹೀಗಾಗಿ ಕೂಡಲೇ ಬಾಕಿ ಹಣ ಪಾವತಿಸಲು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಕಳೆದ 2-3 ವರ್ಷಗಳಿಂದ ಫಸಲ್ ಭೀಮಾ ಯೋಜನೆಯ ಹಣವೂ ರೈತರಿಗೆ ಬಂದಿಲ್ಲ, ಈ ಕುರಿತು ಸಮಗ್ರವಾಗಿ ವಿಚಾರಿಸಿ ಪರಿಹಾರ ನೀಡಬೇಕೆಂದು ಒತ್ತಾಯಿಸಿದರು.

ರಾಜ್ಯ ಪ್ರಧಾನ ಕಾರ್ಯದರ್ಶಿ ರಾಹುಲ್ ಕುಬಕಡ್ಡಿ, ಜಿಲ್ಲಾಧ್ಯಕ್ಷ ಸಂಗಮೇಶ ಸಗರ, ಜಿಲ್ಲಾ ಸಂಚಾಲಕ ರಾಮಗೌಡ ಪಾಟೀಲ, ಜಿಲ್ಲಾ ಉಪಾಧ್ಯಕ್ಷ ವಿರೇಶ ಗೊಬ್ಬುರ, ಸಾತಲಿಂಗಯ್ಯ ಸಾಲಿಮಠ, ನಜೀರ ನಂದರಗಿ, ಪ್ರತಾಪ ನಾಗರಗೋಜಿ, ಶಾನೂರ ನಂದರಗಿ, ರೇಖಾ ಪಾಟೀಲ, ವಿಜಯಲಕ್ಷ್ಮಿ ಗಾಯಕವಾಡ, ಸವಿತಾ ವಾಲಿಕಾರ, ಬಿ.ಬಿ. ಆಯಿಷಾ, ಸಲ್ಮಾ ಜಮಖಾನಿವಾಲಾ, ಮಹದೇವಪ್ಪ ತೇಲಿ, ಅರುಣಕುಮಾರ ತೇರದಾಳ, ದಾವಲಸಾಬ ನಂದರಗಿ, ಶ್ರೀಶೈಲ ವಾಲಿಕಾರ, ರಿಯಾಜ ವಾಲಿಕಾರ, ಜಯರುದ್ದಿನ ಮುಲ್ಲಾ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net