ಬಿಡಾಡಿ ದನಗಳ ಹಾವಳಿ ತಡೆಗೆ ಮನವಿ

web 1
Published on

ಧಾರವಾಡ: ಇಲ್ಲಿನ ಸತ್ತೂರು ಸುತ್ತಲಿನ ಗ್ರಾಮಗಳ ರೈತರ ಜಮೀನುಗಳಿಗೆ ಬಿಡಾಡಿ ದನಗಳು ನುಗ್ಗಿ ಬೆಳೆ ಹಾಳು ಮಾಡುತ್ತಿವೆ. ಇದರಿಂದ ರೈತರಿಗೆ ತೊಂದರೆಯಾಗುತ್ತಿದ್ದು, ದನಗಳ ಹಾವಳಿ ತಡೆಯಲು ಆಗ್ರಹಿಸಿ ಗ್ರಾಮಸ್ಥರು ಅಪರ ಜಿಲ್ಲಾಧಿಕಾರಿಗೆ ಬುಧವಾರ ಮನವಿ ಸಲ್ಲಿಸಿದರು.
ಸತ್ತೂರು ಗ್ರಾಮದ ಸುಮಾರು 60 ರೈತರು ಜಮೀನುಗಳಲ್ಲಿ ಕೊಳವೆ ಬಾವಿಗಳನ್ನು ಹಾಕಿಸಿಕೊಂಡು ವರ್ಷವಿಡೀ ಬೆಳೆ ಬೆಳೆಯುತ್ತಿದ್ದೇವೆೆ. ಕಷ್ಟಪಟ್ಟು ದುಡಿದು ಬೆಳೆಸಿದ ಬೆಳೆಗಳನ್ನು ತಡಸಿನಕೊಪ್ಪ ಗ್ರಾಮದ ದನಗಳು ಹಾಳು ಮಾಡುತ್ತಿವೆ. ಹಲವು ವರ್ಷಗಳಿಂದ ಈ ಸಮಸ್ಯೆ ಇದ್ದು, ಜಿಲ್ಲಾಧಿಕಾರಿ, ತಹಸೀಲ್ದಾರ್ ಹಾಗೂ ಪೊಲೀಸ್ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಇದರಿಂದ ಬೇಸತ್ತು 2 ವರ್ಷಗಳಿಂದ ಬೇಸಿಗೆ ಪೈರು ಬೆಳೆಯುವುದನ್ನೇ ಬಿಟ್ಟಿದ್ದೇವೆ. ಸುತಗಟ್ಟಿ, ಗಾಮನಗಟ್ಟಿ, ಮನಗುಂಡಿ, ಮನಸೂರ ಸುತ್ತಲಿನ ರೈತರೂ ಇದೇ ಸಮಸ್ಯೆ ಎದುರಿಸುತ್ತಿದ್ದಾರೆ. ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಅಪರ ಜಿಲ್ಲಾಧಿಕಾರಿ ಶಿವಾನಂದ ಭಜಂತ್ರಿ ಅವರಿಗೆ ಮನವಿ ಸಲ್ಲಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net