ದಾರಿ ಸಮಸ್ಯೆ ನಿವಾರಿಸುವಂತೆ ಮನವಿ

09 Jaggu 5
ಬೆಳಗಾವಿ ತಾಲೂಕಿನ ಹಿರೇಬಾಗೇವಾಡಿ ಗ್ರಾಪಂ ವ್ಯಾಪ್ತಿಯ ಕಲಾರಕೊಪ್ಪ ಗ್ರಾಮದಲ್ಲಿ ಸಂಚಾರ ಸ್ಥಗಿತಗೊಂಡಿದ್ದು, ಸಮಸ್ಯೆ ನಿವಾರಿಸುವಂತೆ ರೈತರು ಜಿಲ್ಲಾಡಳಿತಕ್ಕೆ ಸೋಮವಾರ ಮನವಿ ಸಲ್ಲಿಸಿದರು. ರೈತ ಶಿಕಂದರೆ ಬಾಗವಾನ್ ಹಾಗೂ ಕಲಾರಕೊಪ್ಪದ ರೈತರು ಇದ್ದರು.
Published on

ಬೆಳಗಾವಿ: ತಾಲೂಕಿನ ಹಿರೇಬಾಗೇವಾಡಿ ಗ್ರಾಪಂ ವ್ಯಾಪ್ತಿಯ ಕಲಾರಕೊಪ್ಪ ಗ್ರಾಮದಲ್ಲಿ ರೈತರು ಓಡಾಡಲು ನಿರ್ಮಿಸಿಕೊಂಡಿದ್ದ ದಾರಿಯನ್ನು ಕೆಲವರು ಸ್ಥಗಿತಗೊಳಿಸಿದ್ದಾರೆ. ಈ ಸಮಸ್ಯೆ ನಿವಾರಿಸುವಂತೆ ರೈತರು ಜಿಲ್ಲಾಡಳಿತಕ್ಕೆ ಸೋಮವಾರ ಮನವಿ ಸಲ್ಲಿಸಿದರು.

20 ವರ್ಷದ ಹಿಂದೆ 100-150 ಎಕರೆ ಜಮೀನಿಗೆ ಓಡಾಡಲು ದಾರಿಯಿಲ್ಲದ ಕಾರಣ ಎಲ್ಲ ರೈತರು 4 ಗುಂಟೆ ಜಮೀನು ನೀಡಿ ನಿರ್ಮಿಸಿದ ರಸ್ತೆಯನ್ನು ಕೆಲವರು ಬಂದ್ ಮಾಡಿದ್ದಾರೆ. ಮೊದಲೇ ಮುಂಗಾರು ಆರಂಭಗೊಂಡಿದ್ದು, ಬಿತ್ತನೆ ಕಾರ್ಯ ಆರಂಭಗೊಂಡಿದೆ. ಆದರೆ, ಏಕಾಏಕಿ ದಾರಿ ಬಂದ್ ಮಾಡಿದ್ದರಿಂದ ಮುಂಗಾರು ಬಿತ್ತನೆಯ ವೇಳೆ ರೈತರು ತೊಂದರೆ ಅನುಭವಿಸುವಂತಾಗಿದೆ. ಕೂಡಲೇ ಜಿಲ್ಲಾಧಿಕಾರಿಗಳು ಮಧ್ಯೆ ಪ್ರವೇಶಿಸಿ ಸಮಸ್ಯೆ ನೀಗಿಸಬೇಕು ಎಂದು ಆಗ್ರಹಿಸಿದರು. ರೈತ ಶಿಖಂದರೆ ಬಾಗವಾನ್ ಹಾಗೂ ಕಲಾರಕೊಪ್ಪದ ರೈತರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net