ಅಯ್ಯಪ್ಪ ಸ್ವಾಮಿ ದೇಗುಲ ಉಳಿಸಲು ಮನವಿ

13 Dwd 6
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ನಗರದ ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ನಿರ್ಮಿಸಿರುವ ನೂತನ ಸ್ವಾಮಿ ಅಯ್ಯಪ್ಪ ದೇವಸ್ಥಾನವನ್ನು ತೆರವುಗೊಳಿಸಬಾರದು ಎಂದು ಮುಮ್ಮಿಗಟ್ಟಿ ಗ್ರಾಮಸ್ಥರು ಕುಲಪತಿಗೆ ಸೋಮವಾರ ಮನವಿ ಸಲ್ಲಿಸಿದರು.

ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಗ್ರಾಮಸ್ಥರು ನಂತರ ಕುಲಪತಿ ಡಾ. ಪಿ.ಎಲ್. ಪಾಟೀಲ ಅವರಿಗೆ ಮನವಿ ಸಲ್ಲಿಸಿದರು. ಬಳಿಕ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರಿಗೂ ಮನವಿ ಸಲ್ಲಿಸಿ ದೇವಸ್ಥಾನವನ್ನು ಪುನರುಜ್ಜೀವನಗೊಳಿಸಬೇಕು ಎಂದು ವಿನಂತಿರಿಸದರು.

ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಸಿದ್ದನಗೌಡ ಪಾಟೀಲ, ಹಿರಿಯರಾದ ಕಲ್ಲನಗೌಡ ಪಾಟೀಲ, ಯಶವಂತಗೌಡ ಪಾಟೀಲ, ರಾಜು ಮಲ್ಲೂರ, ದ್ಯಾಮಪ್ಪ ಕೆರೆಕ್ಕನವರ, ಮಂಜುನಾಥ ಹಣಬರ, ನಾಗರಾಜ ಹಾರೋಬಿಡಿ, ನಾಗರಾಜ ಕಿತ್ತೂರು, ಸಂಗಯ್ಯ ಗುಡ್ಡದಮಠ, ನಿಂಗನಗೌಡ ಪಾಟೀಲ, ಮಲ್ಲಿಕಾರ್ಜುನ ಕುಶಪ್ಪನವರ, ರಾಮಪ್ಪ ನಾಯಕರ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net