ಪತ್ರಕರ್ತರ ಬಡಾವಣೆ ಸಮಸ್ಯೆ ನಿವಾರಿಸುವಂತೆ ಮನವಿ

23
Published on

ಮೈಸೂರು: ಆರ್.ಟಿ. ನಗರದಲ್ಲಿರುವ ಇರುವ ಪತ್ರಕರ್ತರ ಬಡಾವಣೆಯಲ್ಲಿ ಸಮಸ್ಯೆಗಳು ಹೆಚ್ಚಾಗಿದ್ದು, ಪರಿಹರಿಸಿ ಕೊಡಬೇಕೆಂದು ಬಡಾವಣೆಯ ನಿವಾಸಿಗಳ ಬೋಗಾದಿ ಪಟ್ಟಣ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುಜಯ್‌ಕುಮಾರ್‌ಗೆ ಮನವಿ ಸಲ್ಲಿಸಿದರು.

ಪತ್ರಕರ್ತರ ಬಡಾವಣೆಯಲ್ಲಿ ಒಳಚರಂಡಿ ವ್ಯವಸ್ಥೆ ಇಲ್ಲದೇ ನೀರೆಲ್ಲಾ ರಸ್ತೆಯಲ್ಲಿ ಹರಿದು ದುರ್ವಾಸನೆ ಬರುತ್ತಿದೆ. ಖಾಲಿ ನಿವೇಶನಗಳಲ್ಲಿ ಪೊದೆ, ಗಿಡಗಂಟುಗಳು ಬೆಳೆದು ಹಾವುಗಳು ಹೆಚ್ಚಾಗಿವೆ. ಕಬಿನಿ ನೀರು ಬಡಾವಣೆಯ ಪಕ್ಕದಲ್ಲೇ ಹೋದರೂ ನಿವಾಸಿಗಳಿಗೆ ಲಭ್ಯವಿಲ್ಲ. ಬೀದಿ ದೀಪಗಳಿಲ್ಲದೇ ರಾತ್ರಿಯ ವೇಳೆ ಸಂಚಾರಕ್ಕೆ ತೊಂದರೆಯಾಗಿದೆ. ಬಾರ್‌ಗಳಿದ್ದು ರಾತ್ರಿ ವೇಳೆ ಕುಡುಕರ ಹಾವಳಿ ಹೆಚ್ಚಾಗಿದೆ. ಬೇರೆ ಬಡಾವಣೆಗಳಿಂದ ಕಸ ತಂದು ಸುರಿಯುತ್ತಿದ್ದು, ಅದನ್ನು ತಡೆಗಟ್ಟಬೇಕು. ಉದ್ಯಾನವನ ಅಭಿವೃದ್ಧಿಪಡಿಸಿ ಕೊಡಬೇಕು ಎಂದು ಮನವಿ ಮಾಡಿದರು.

ಬಡಾವಣೆ ನಿವಾಸಿಗಳ ಮನವಿಗೆ ಸ್ಪಂದಿಸಿದ ಸಿಇಒ ಸುಜಯ್‌ಕುಮಾರ್ ಮಾತನಾಡಿ, ಬಡಾವಣೆ ಇತ್ತೀಚಿಗೆ ನಮ್ಮ ವ್ಯಾಪ್ತಿಗೆ ಬಂದಿದ್ದು, ನಾವೇ ಸ್ಥಳಕ್ಕೆ ಖುದ್ದಾಗಿ ಬಂದು ಎಷ್ಟು ಸಾಧ್ಯವೋ ಅಷ್ಟು ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.

ಗಿರಿಕನ್ಯೆ ವಡ್ಡಗೆರೆ, ಎಸ್.ಜಿ.ಶಾಲಿನಿ, ಡಾ. ರಜನಿ ಲೋಕೇಶ್, ಹರವೆ ಮಹೇಶ್, ಅಶ್ವಿನಿ, ಪೂರ್ಣಿಮಾ , ವಿಶ್ವನಾಥ್, ದಿಡ್ಡಹಳ್ಳಿ ರಘು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net