ಹದಗೆಟ್ಟ ರಸ್ತೆಗಳನ್ನು ದುರಸ್ತಿಗೆ ಮನವಿ

sri-2 (2)
Published on

ಶೃಂಗೇರಿ: ರಾಜ್ಯಸರ್ಕಾರದ ಜನ ವಿರೋಧಿ ನೀತಿ ಹಾಗೂ ರಸ್ತೆ ದುರಸ್ತಿಗೆ ಒತ್ತಾಯಿಸಿ ಮಂಡಲ ಬಿಜೆಪಿ ಹಾಗೂ ಕಿಗ್ಗಾ ಬಿಜೆಪಿ ಶಕ್ತಿ ಕೇಂದ್ರದ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಮರ್ಕಲ್ ಗ್ರಾಪಂ ಪಿಡಿಒಗೆ ಮನವಿ ಸಲ್ಲಿಸಿದರು.

ರಾಜ್ಯ ಎಸ್ಸಿ ಮೋರ್ಚಾ ವಕ್ತಾರ ಬಿ.ಶಿವಶಂಕರ್ ಮಾತನಾಡಿ, ಪ್ರತಿ ಗ್ರಾಪಂನಲ್ಲಿ ಜನಸಾಮಾನ್ಯರಿಗೆ ಸಾಗುವಳಿ ಚೀಟಿ ಹಾಗೂ ಇ-ಸ್ವತ್ತು ನೀಡದೆ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಗ್ರಾಮೀಣ ರಸ್ತೆಗಳು ಹೊಂಡ-ಗುಂಡಿಗಳಿಂದ ಆವೃತ್ತಗೊಂಡು ವಾಹನ ಸಂಚಾರ ದುಸ್ತರವಾಗಿದೆ. ರೈತರು ನೀಡಿದ ಅರ್ಜಿ ನಮೂನೆ 53-57 ಅರ್ಜಿಗಳ ವಿಲೇವಾರಿಯಾಗಿಲ್ಲ. ಜಲಜೀವನ್ ಮಿಷನ್ ಯೋಜನೆ ಅಡಿಯಲ್ಲಿ ಕಾಮಗಾರಿಗಳು ಸ್ಥಗಿತಗೊಂಡಿದೆ. ಅಭಿವೃದ್ಧಿಯೇ ನಮ್ಮ ಮೂಲ ಮಂತ್ರ ಎನ್ನುವ ಸರ್ಕಾರಕ್ಕೆ ಜನ ಸಾಮಾನ್ಯರು ಹಾಗೂ ರೈತರ ಕುರಿತು ಕಾಳಜಿ ಇಲ್ಲ. ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆ ಹೆಸರಿನಲ್ಲಿ ಗ್ರಾಮಸ್ಥರ ಮೂಲ ಸೌಕರ್ಯಗಳ ಕಡೆ ಗಮನ ನೀಡದೆ ಕಾಲ ಕಳೆಯುತ್ತಿದೆ ಎಂದರು.

ಬಿಜೆಪಿ ಮಂಡಲ ಅಧ್ಯಕ್ಷ ಉಮೇಶ್ ತಲಗಾರು, ಕಿಗ್ಗಾಶಕ್ತಿ ಕೇಂದ್ರದ ಅಧ್ಯಕ್ಷ ಚಿನ್ನಪ್ಪ ಯಡದಾಳ್, ತಾಪಂ ಮಾಜಿ ಅಧ್ಯಕ್ಷೆ ಜಯಶೀಲ, ಕಿಗ್ಗಾ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ವಿಜಯ್ ತಿಪ್ಪರಮಕ್ಕಿ, ಬಿಜೆಪಿ ಮುಖಂಡರಾದ ಕೆ.ಎಂ.ಶ್ರೀನಿವಾಸ್,ನವೀನ್ ಕಿಗ್ಗಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net