

ಮುಂಡರಗಿ: ತಾಲೂಕಿನ ಡಂಬಳ ಗ್ರಾಮದಲ್ಲಿ ತಾಲೂಕು ವೀರಶೈವ ಲಿಂಗಾಯತ ಪಂಚಮಸಾಲಿ ಸಮುದಾಯದವರು ಪಟ್ಟಣದಲ್ಲಿ ನಿರ್ಮಿಸುತ್ತಿರುವ ವೀರರಾಣಿ ಕಿತ್ತೂರ ಚೆನ್ನಮ್ಮ ಸಮುದಾಯ ಭವನ ನಿರ್ಮಾಣಕ್ಕೆ ಅನುದಾನ ಕಲ್ಪಿಸಬೇಕು ಎಂದು ಶಾಸಕ ಜಿ.ಎಸ್. ಪಾಟೀಲ ಅವರಿಗೆ ಗುರುವಾರ ಮನವಿ ಸಲ್ಲಿಸಲಾಯಿತು.
ಶಾಸಕರು ಮಾತನಾಡಿ, ಪಂಚಮಸಾಲಿ ಸಮುದಾಯವನ್ನು ನಿರ್ಲಕ್ಷಿಸುವ ಮಾತೇ ಇಲ್ಲ. ಈ ಸಮುದಾಯ ಇತರೆ ಎಲ್ಲ ಸಮುದಾಯದೊಂದಿಗೆ ಸಹೋದರತ್ವ ಭಾವನೆ ಹೊಂದಿದೆ. ಭವನ ನಿರ್ಮಾಣಕ್ಕೆ ಅನುದಾನ ಮಂಜೂರು ಮಾಡುಲು ಪ್ರಯತ್ನಿಸುತ್ತೇನೆ ಎಂದು ಭರವಸೆ ನೀಡಿದರು.
ಸಿದ್ದಣ್ಣ ಬಂಡಿ, ಎಸ್.ವಿ.ಪಾಟೀಲ, ಅಶೋಕ ಹಂದ್ರಾಳ, ಮಹೇಶ ಕೊರ್ಲಹಳ್ಳಿ, ಕೋಟ್ರಪ್ಪ ಸ್ವಾಗಿ, ಭರತ ಕೊರ್ಲಹಳ್ಳಿ, ಬಸವರಾಜ ಕೊತಂಬ್ರಿ, ಬಸವರಾಜ ಮೇಟಿ, ಮಂಜುನಾಥ ಇಟಗಿ, ಎಂ.ಎಸ್.ಹೊಟ್ಟಿನ, ಬಸವರಾಜ ಮೇಟಿ, ಸೋಮಣ್ಣ ದೇಸಾಯಿ, ಬಸವರಾಜ ದೇಸಾಯಿ, ರಮೇಶಗೌಡ ಪಾಟೀಲ, ಮಂಜುನಾಥ ಮುಧೋಳ, ಅಂದಪ್ಪ ಕಲ್ಲಳ್ಳಿ, ವೀರಭದ್ರಪ್ಪ ಮೇಟಿ, ಕುಮಾರ ಬನ್ನಿಕೊಪ್ಪ, ಅಂದಪ್ಪ ಹಂದ್ರಾಳ, ಪ್ರಕಾಶ ಪಾಟೀಲ, ಪ್ರಶಾಂತ ಗುಡದಪ್ಪನವರು ಇತರರು ಇದ್ದರು.