ಹಮಾಲರ ಕಾಲನಿಗೆ ಸೌಕರ್ಯ ಒದಗಿಸಲು ಮನವಿ

01 GJD 1
Published on

ಗಜೇಂದ್ರಗಡ: ತಾಲೂಕಿನ ರಾಂಪೂರ ಗ್ರಾಪಂ ವ್ಯಾಪ್ತಿಯ ಪುರ್ತಗೇರಿ ಗ್ರಾಮದ ಸರಹದ್ದಿನ ಹಮಾಲರ ಕಾಲನಿಗೆ ಮೂಲ ಸೌಲಭ್ಯ ಒದಗಿಸುವಂತೆ ಆಗ್ರಹಿಸಿ ತಹಸೀಲ್ದಾರ್ ಕಿರಣಕುಮಾರ ಕುಲಕರ್ಣಿ ಅವರಿಗೆ ಶನಿವಾರ ಮನವಿ ಸಲ್ಲಿಸಲಾಯಿತು.

ಪಟ್ಟಣಕ್ಕೆ ಹೊಂದಿಕೊಂಡಿರುವ ಹಮಾಲರ ಕಾಲನಿಯಲ್ಲಿ 600 ಜನ ವಾಸಿಸುತ್ತಿದ್ದಾರೆ. ಇದುವರೆಗೂ ಸಾರ್ವಜನಿಕ ಶೌಚಗೃಹ, ಕುಡಿಯುವ ನೀರು ಹಾಗೂ ಇತರ ಕನಿಷ್ಠ ಸೌಕರ್ಯಗಳನ್ನೂ ಒದಗಿಸಿಲ್ಲ. ಅನೇಕ ಬಾರಿ ಗ್ರಾಪಂ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎಂದಿದ್ದಾರೆ.

ಗುಡ್ಡದಲ್ಲಿನ ಸರ್ಕಾರಿ ಜಮೀನಿನ ಪೈಕಿ 36.30 ಎಕರೆ ಜಮೀನನ್ನು ತಹಸೀಲ್ದಾರ್ ಕಾರ್ಯಾಲಯದ ಕಟ್ಟಡ ಹಾಗೂ ಇತರ ಇಲಾಖೆಯ ಕಟ್ಟಡ ನಿರ್ಮಾಣಕ್ಕಾಗಿ ಕಾಯ್ದಿರಿಸಲಾಗಿದೆ. ಇದರಲ್ಲಿ ನಮ್ಮ ಕಾಲನಿ ರಸ್ತೆಯ ಉತ್ತರ ಭಾಗಕ್ಕೆ ಹೊಂದಿಕೊಂಡಿರುವ 30 ಗುಂಟೆ ಜಮೀನನ್ನು ನಿರಾಶ್ರಿತರಿಗೆ ನಿವೇಶನಗಳಾಗಿಸಿ ಕೊಡಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.

ಬಸವರಾಜ ಕೊಟಗಿ, ಅನಿಲ ಕರ್ಣೇ, ಬಸವರಾಜ ಹೂಗಾರ, ಶ್ರೀಕಾಂತ ಹರಪನಹಳ್ಳಿ, ಕಳಕಪ್ಪ ಚಿಲಝರಿ, ಈರಪ್ಪ ಮೆಣಸಗಿ, ಮಂಜುನಾಥ ಕುಂಬಾರ, ಮಾರುತಿ ಜೋಶಿ, ಗಣೇಶ ವಾಲ್ಮೀಕಿ, ಚುಮ್ಮಪ್ಪ ಮಾಲೋತ್ತರ, ಶಿವು ಅರಳಿಗಿಡದ, ಕುಮಾರ ಕಲಾಲ, ಚಂದಾಲಿಂಗಪ್ಪ ಚಳಿಗೇರಿ, ರೇಣುಕರಾಜ ಚಳಿಗೇರಿ, ಪರಶುರಾಮ ಗುಳೇದ, ಸಾವಿತ್ರೆವ್ವಾ ಅರಗಂಜಿ, ರಾಜೇಶ್ವರಿ ಬುಳ್ಳಾ, ರೇಣುಕ ಆಹರಪನಹಳ್ಳಿ, ದಂಡೆವ್ವ ವಾಲ್ಮೀಕಿ, ಭೀಮಮ್ಮ ಗುಳೇದ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net