ರಾಷ್ಟ್ರಧ್ವಜಕ್ಕೆ ಅಪಮಾನ ತಡೆಯಲು ಮನವಿ

New Project (6)
Published on

ಬೆಳ್ತಂಗಡಿ: ರಾಷ್ಟ್ರಧ್ವಜಕ್ಕೆ ಅಪಮಾನ ಮಾಡುವುದನ್ನು ತಡೆಯಲು ಕಾನೂನು ಕ್ರಮ ಕೈಗೊಳ್ಳುವ ಬಗ್ಗೆ ಹಿಂದು ಜನಜಾಗೃತಿ ಸಮಿತಿ ವತಿಯಿಂದ ತಹಸೀಲ್ದಾರ್ ಪೃಥ್ವಿ ಸಾನಿಕಂ, ಬೆಳ್ತಂಗಡಿ ಪೊಲೀಸ್ ಠಾಣಾ ಅಧಿಕಾರಿ ಸುಬ್ಬಾಪುರ ಮಠ ಹಾಗೂ ತಾಲೂಕು ಶಿಕ್ಷಣ ಅಧಿಕಾರಿ ತಾರಕೇಸರಿ ಅವರಿಗೆ ಮನವಿ ಸಲ್ಲಿಸಲಾಯಿತು.

ರಾಷ್ಟ್ರಧ್ವಜಕ್ಕೆ ಅವಮಾನ ಮಾಡುವುದನ್ನು ತಡೆಯಲು ರಾಷ್ಟ್ರಧ್ವಜ ಗೌರವ ಕೃತಿ ಸಮಿತಿ ಸ್ಥಾಪಿಸಬೇಕೆಂದು ತಹಸೀಲ್ದಾರ್ ಪೃಥ್ವಿ ಸಾನಿಕಂ ಅವರಿಗೆ, ಪ್ಲಾಸ್ಟಿಕ್ ರಾಷ್ಟ್ರಧ್ವಜಗಳನ್ನು ತಯಾರಿಸಿ ಮಾರಾಟ ಮಾಡುತ್ತಿದ್ದರೆ ಕೂಡಲೇ ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಬೆಳ್ತಂಗಡಿ ಪೊಲೀಸ್ ಠಾಣಾ ಅಧಿಕಾರಿ ಸುಬ್ಬಾಪುರ ಮಠ ಅವರಿಗೆ ಹಾಗೂ ಶಾಲೆಗಳಲ್ಲಿ ರಾಷ್ಟ್ರಧ್ವಜವನ್ನು ಗೌರವಿಸಿ ಎಂಬ ಉಪಕ್ರಮ ನಡೆಸಲು ತಾಲೂಕು ಶಿಕ್ಷಣ ಅಧಿಕಾರಿ ತಾರಕೇಸರಿ ಅವರಿಗೆ ಮನವಿ ನೀಡಲಾಯಿತು.

ವಕೀಲ ಉದಯ ಬಿ.ಕೆ., ಶ್ರೀ ದೇವಿ ಮಹಾಮ್ಮಾಯಿ ಭಜನಾ ಮಂದಿರ ಪಿಲ್ಯಾ ಕಾರ್ಯದರ್ಶಿ ಉಮೇಶ್ ಬಂಗೇರ, ವಕೀಲ ಅಕ್ಷಯ್ ಟಿ.ರಾವ್ ಯೋಗೀಶ್ ಕೆಂಬರ್ಜೆ, ವಕೀಲ ಹರ್ಷಿತ್, ಹರೀಶ್ ಮುದ್ದಿನಡ್ಕ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net