

ವಿಜಯಪುರ : ಅಂಗನವಾಡಿ ನೌಕರರ ಸಂದ ಆದೇಶ ಮೇರೆಗೆ ಮಾ. 7 ರಂದು ಬೆಂಗಳೂರಿನಲ್ಲಿ ನಡೆಯಲಿರುವ ಮುಷ್ಕರದಲ್ಲಿ ಎಲ್ಲ ಅಂಗನವಾಡಿ ನೌಕರರು ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಸಂದ ಜಿಲ್ಲಾಧ್ಯಕ್ಷೆ ಸುನಂದಾ ನಾಯಕ ತಿಳಿಸಿದ್ದಾರೆ.
ನಗರದಿಂದ ಮಾ. 6ರಂದು ಸಂಜೆ 5 ಗಂಟೆಗೆ ಗೋಲಗುಂಬಜ್ ಎಕ್ಸ್ಪ್ರೆಸ್ ಟ್ರೇನ್ನಲ್ಲಿ ಎಲ್ಲ ಅಂಗನವಾಡಿ ನೌಕರರು ತೆರಳಬೇಕು. ಅಂಗನವಾಡಿ ನೌಕರರ ವೇತನ ಹೆಚ್ಚಳ, ಗ್ರಾ$ಚ್ಯುಟಿ, ಅಂಗನವಾಡಿ ಕೇಂದ್ರಗಳನ್ನು ಅಂಗನವಾಡಿ ಮಾಂಟಿಸ್ಸರಿ ಎಂದು ಘೋಷಿಸಿ ಮೇಲ್ದರ್ಜೆಗೇರಿಸಬೇಕು.
ಗುಜರಾತ್ ಹೈಕೋರ್ಟ್ ತೀರ್ಪು ಜಾರಿಗೊಳಿಸುವುದು ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಲಾಗುವುದು.
ಆದ್ದರಿಂದ ಅಂದು ಬೆಂಗಳೂರಿನ ಫ್ರೀಡಮ್ ಪಾರ್ಕ್ನಲ್ಲಿ ನಡೆಯುವ ಮುಷ್ಕರದಲ್ಲಿ ಅಂಗನವಾಡಿ ನೌಕರರು ಭಾಗವಹಿಸುವಂತೆ ಎಂದು ಸಂದ ಜಿಲ್ಲಾಧ್ಯಕ್ಷೆ ಅಶ್ವಿನಿ ತಳವಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.