ಕಾಡಾನೆ ಸ್ಥಳಾಂತರಕ್ಕೆ ಒತ್ತಾಯಿಸಿ ಶಾಸಕರಿಗೆ ಮನವಿ

bhr 1 (4)
Published on

ಬಾಳೆಹೊನ್ನೂರು: ಬಾಳೆಹೊನ್ನೂರು ವಲಯ ಅರಣ್ಯ ಇಲಾಖೆ ವ್ಯಾಪ್ತಿಯ ಬನ್ನೂರು ಗ್ರಾಮದಲ್ಲಿ ಕಳೆದ ಒಂದು ವಾರದಿಂದ ಎರಡು ಕಾಡಾನೆಗಳು ಬೀಡು ಬಿಟ್ಟು ರೈತರ ಜಮೀನುಗಳಲ್ಲಿ ನುಗ್ಗಿ ಹಾಳು ಮಾಡುತ್ತಿವೆ. ಈ ಹಿನ್ನೆಲೆಯಲ್ಲಿ ಕೂಡಲೇ ಕಾಡಾನೆಗಳನ್ನು ಹಿಡಿದು ಸ್ಥಳಾಂತರಿಸುವಂತೆ ಗ್ರಾಮಸ್ಥರು ಶಾಸಕ ಟಿ.ಡಿ.ರಾಜೇಗೌಡಗೆ ಮನವಿ ಸಲ್ಲಿಸಿದರು.

ಕಳೆದ ಒಂದು ವಾರದಿಂದ ಎರಡು ಕಾಡಾನೆಗಳು ಬನ್ನೂರು ವ್ಯಾಪ್ತಿಯ ಕುಂಬ್ರುಮನೆ, ಸೊಪ್ಪಿನಕಾಡು, ಹುಣಸೆಕೆರೆ ಗ್ರಾಮದಲ್ಲಿ ಬೀಡುಬಿಟ್ಟಿವೆ. ಬೆಳಗ್ಗೆ ಮತ್ತು ಸಂಜೆ ಊರೊಳಗೆ ಕಾಡಾನೆಗಳು ಬರುತ್ತಿದ್ದು, ಇದರಿಂದ ಶಾಲಾ ವಿದ್ಯಾರ್ಥಿಗಳು, ಕೂಲಿ ಕಾರ್ಮಿಕರು, ಗ್ರಾಮಸ್ಥರು ಸಂಚರಿಸಲು ಭಯಪಡುತ್ತಿದ್ದಾರೆ. ಶುಕ್ರವಾರ ಬೆಳಗ್ಗೆ ಶಾಲಾ ವಿದ್ಯಾರ್ಥಿಗಳಿಗೆ ಕಾಡಾನೆಗಳು ಎದುರಾಗಿದೆ. ಜಮೀನಿನಲ್ಲಿರುವ 50-60 ವರ್ಷ ಹಳೆಯ ಅಡಕೆ, ಕಾಫಿ, ತೆಂಗಿನ ಮರವನ್ನು ಉರುಳಿಸಿ ಹಾನಿ ಮಾಡಿವೆ. ಇದರಿಂದಾಗಿ ರೈತರಿಗೆ ಅಪಾರ ನಷ್ಟ ಸಂಭವಿಸಿದೆ ಎಂದರು.

ಗ್ರಾಮಸ್ಥರಾದ ಬಿ.ಜಿ.ಮಂಜುನಾಥ್, ಬಿ.ಟಿ.ಶೇಷಪ್ಪಗೌಡ, ಕೆ.ಎಲ್.ಪ್ರಕಾಶ್, ಕೆ.ಬಿ.ಆದರ್ಶ್ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net