ಜನರಿಗೆ ನೀಡಿದ್ದ ಹಕ್ಕು ಪತ್ರ ಸರಿಯಿಲ್ಲ

03-06-25--krs2
ಕೆ.ಆರ್.ಸಾಗರ ರಸ್ತೆ ಅಭಿವೃದ್ದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಶಾಸಕ ರಮೇಶ ಬಂಡಿಸಿದ್ದೇಗೌಡರಿಗೆ ಗ್ರಾ.ಪಂ ಅಧ್ಯಕ್ಷೆ ಜಯಂತಿ ಕಾಳಪ್ಪ ಮತ್ತು ಗ್ರಾ.ಪಂ ಸದಸ್ಯ ನಾಗೇಂದ್ರ ಕುಮಾರ್ ಮನವಿ ಮಾಡಿದರು.
Published on

ಕೆ.ಆರ್.ಸಾಗರ: ಗ್ರಾಮದ ಜನರಿಗೆ ನೀಡಿರುವ ಹಕ್ಕು ಪತ್ರವನ್ನು ಖಾತೆ ಮಾಡುವಂತೆ ಹಾಗೂ ಗ್ರಾಮದ ಅಭಿವೃದ್ಧಿಪಡಿಸುವಂತೆ ರಸ್ತೆ ಅಭಿವೃದ್ಧಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಶಾಸಕ ರಮೇಶ ಬಂಡಿಸಿದ್ದೇಗೌಡ ಅವರಿಗೆ ಗ್ರಾಪಂ ಅಧ್ಯಕ್ಷೆ ಜಯಂತಿ ಕಾಳಪ್ಪ ಹಾಗೂ ಸದಸ್ಯ ನಾಗೇಂದ್ರ ಕುಮಾರ್ ಮನವಿ ಮಾಡಿದರು.

ಇದಕ್ಕೆ ಪ್ರತಿಕ್ರಿಯೆ ನೀಡಿದ ಶಾಸಕರು, ಈ ಹಿಂದಿನ ಸರ್ಕಾರದಲ್ಲಿ ಕಂದಾಯ ಗ್ರಾಮವನ್ನಾಗಿ ಮಾಡಿದ್ದು, ಸುಮಾರು 800 ನಿವಾಸಿಗಳಿಗೆ ನೀಡಿರುವ ಹಕ್ಕು ಪತ್ರ ಸರಿಯಾಗಿಲ್ಲ, ಇದಕ್ಕೆ ನೀಡಿರುವ ದಾಖಲೆಗಳು ಸರಿಯಿಲ್ಲ, ಕೆಲವು ದಾಖಲೆಗಳೇ ಇಲ್ಲ, ಅಳತೆ ಸರಿಯಿಲ್ಲ. ಈ ಕಾರಣಗಳಿಂದ ಮತ್ತೆ ಭೂ ದಾಖಲಾತಿ ಕಚೇರಿಯ ಸರ್ವೇಯರ್‌ಗಳಿಂದ ಅಳತೆ ಮಾಡಿಸಿದ್ದು, 15 ದಿನಗಳಲ್ಲಿ ಮತ್ತೆ ಹಕ್ಕು ಪತ್ರ ನೀಡಲಾಗುತ್ತಿದ್ದು, ನಂತರ ಖಾತೆ ಮಾಡಲಾಗುತ್ತದೆ ಎಂದರು.

ಕೆ.ಆರ್.ಸಾಗರ ಗ್ರಾಪಂ ಸದಸ್ಯರಾದ ರವಿಕುಮಾರ್, ದೇವರಾಜು, ಜಗದೀಪ್ ಸಿಂಗ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net