ಪ್ರತ್ಯೇಕ ಪಾಲಿಕೆಗಾಗಿ ಸಚಿವ ಲಾಡ್‌ಗೆ ಮನವಿ

web 1
Published on

ಧಾರವಾಡ: ಧಾರವಾಡದ ಸಮಗ್ರ ಅಭಿವೃದ್ಧಿಯ ಹಿತದೃಷ್ಟಿಯಿಂದ ಪ್ರತ್ಯೇಕ ಮಹಾನಗರ ಪಾಲಿಕೆ ಸ್ಥಾಪಿಸಬೇಕು ಎಂದು ಧಾರವಾಡ ಪ್ರತ್ಯೇಕ ಮಹಾನಗರ ಪಾಲಿಕೆ ಅಭಿವೃದ್ಧಿ ವೇದಿಕೆಯಿಂದ ಕಾರ್ಮಿಕ ಸಚಿವ ಸಂತೋಷ ಲಾಡ್ ಅವರಿಗೆ ಮಂಗಳವಾರ ಮನವಿ ಸಲ್ಲಿಸಲಾಯಿತು.
ನಗರದಲ್ಲಿರುವ ಕಾಂಗ್ರೆಸ್ ಮುಖಂಡ ದೀಪಕ ಚಿಂಚೋರೆ ಮನೆಗೆ ಭೇಟಿ ನೀಡಿದ್ದ ಸಚಿವ ಲಾಡ್‌ರನ್ನು ಭೇಟಿ ಮಾಡಿದ ನಿಯೋಗ, ಸರ್ಕಾರದ ಗಮನ ಸೆಳೆಯಬೇಕು ಎಂದು ವಿನಂತಿಸಿದರು.
ಇದಕ್ಕೆ ಸ್ಪಂದಿಸಿದ ಸಚಿವ ಲಾಡ್, ಶೀಘ್ರದಲ್ಲೇ ಸಭೆ ಕರೆದು ಸಂಪೂರ್ಣ ಮÁಹಿತಿ ಕಲೆ ಹಾಕಲಾಗುವುದು. ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ದೀಪಕ ಚಿಂಚೋರೆ, ವೆಂಕಟೇಶ ಮಾಚಕನೂರ, ರವಿಕುಮÁರ ಮÁಳಿಗೇರ, ಶಂಕರ ನೀರಾವರಿ, ವಸಂತ ಅರ್ಕಾಚಾರ, ನಾಗೇಶ ಕಟಕೊಳ, ಸತೀಶ ನಾಯ್ಕರ್, ಭೀಮಸೇನ ಕಾಗಿ, ಶಿವಕಿರಣ ಅಗಡಿ, ಶಾಂತವೀರ ಬೆಟಗೇರಿ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net