

ಹುಬ್ಬಳ್ಳಿ: ಬೇಲೂರು ಕೈಗಾರಿಕಾ ಪ್ರದೇಶದ ಐತಾಜ್ ವೆಂಚ್ಯೂರ್ಸ್ ಕಂಪನಿಯಿಂದ ಆಗುತ್ತಿರುವ ಮಾಲಿನ್ಯ ನಿಯಂತಿಸಲು ಕ್ರಮ ಜರುಗಿಸುವಂತೆ ಒತ್ತಾಯಿಸಿ ಧಾರವಾಡ ಬೆಳವಣಿಗೆ ಕೇಂದ್ರ ಉದ್ಯಮಗಳ ಸಂಘದ ಪದಾಧಿಕಾರಿಗಳು, ಧಾರವಾಡದಲ್ಲಿ ಇತ್ತೀಚೆಗೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರಿಗೆ ಮನವಿ ಸಲ್ಲಿಸಿದರು.
ಒಂದೂವರೆಗೆ ವರ್ಷದಿಂದ ಈ ಕಂಪನಿಯಿಂದ ಕೈಗಾರಿಕೆಗಳ ಮೇಲೆ ಆಗುತ್ತಿರುವ ದುಷ್ಪರಿಣಾಮಗಳ ಕುರಿತು ಹೋರಾಟ ಮಾಡಿದ್ದೇವೆ. ಪತ್ರ ವ್ಯವಹಾರಗಳನ್ನು ಕೂಡ ಮಾಡಿದ್ದೇವೆ. ಕೂಡಲೇ ಈ ಘಟಕವನ್ನು ಬಂದ್ ಮಾಡುವಂತೆ ಸಂಘದ ಉಪಾಧ್ಯಕ್ಷ ಎಸ್.ಸಿ. ಪಾಟೀಲ (ರಾಜು) ಅವರು ಸಚಿವರಿಗೆ ವಿವರಿಸಿ ಆಗ್ರಹಿಸಿದರು. ಸಚಿವರು ಪರಿಶೀಲಿಸಿ ಕ್ರಮದ ಭರವಸೆ ನೀಡಿದರು.
ಪದಾಧಿಕಾರಿಗಳಾದ ಮಂಜುನಾಥ ಗೋಕಾವಿ, ಶ್ರೀಧರ ಶೇಟ್, ಸಂಜೀವ ಕುಮಾರ ದಾಸ, ಕೆ.ವೈ. ಗಾಳಿ, ರಾಜೀವ ನಿಗದಿ, ಶಿವಯೋಗಿ ಹರಳಟ್ಟಿ, ಚಂದ್ರಶೇಖರ, ಶೈಲೇಶ ಹಂಪಣ್ಣವರ, ಎಂ.ಡಿ. ಪಾಟೀಲ, ಪ್ರಕಾಶ ಚಂದ್ರ ಇತರರು ಇದ್ದರು.