ವಿಐಎಸ್‌ಎಲ್‌ಗೆ ಬಂಡವಾಳ ಹೂಡಲು ಮನವಿ

byr
ವಿಐಎಸ್‌ಎಲ್ ಪುನಶ್ಚೇತನ ಸಂಬಂಧ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಬಿ.ವೈ.ರಾಘವೇಂದ್ರ ಮನವಿ ಸಲ್ಲಿಸಿದರು. ವಿ.ಸೋಮಣ್ಣ, ಜೆ.ಜಗದೀಶ, ಅಮೃತ್‌ಕುಮಾರ್, ಕೆ.ಬಿ.ಮಲ್ಲಿಕಾರ್ಜುನ, ಜೆ.ಕಿರಣ್, ಆನಂದ್, ಎಸ್.ಮೋಹನ್ ಮುಂತಾದವರಿದ್ದರು.
Published on

ಶಿವಮೊಗ್ಗ: ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಮಂಗಳವಾರ ದೆಹಲಿಯಲ್ಲಿ ಕೇಂದ್ರ ಬೃಹತ್ ಕೈಗಾರಿಕಾ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರನ್ನು ಭೇಟಿಯಾಗಿ ಭದ್ರಾವತಿ ವಿಐಎಸ್‌ಎಲ್ ಕಾರ್ಖಾನೆಯನ್ನು ಶೀಘ್ರವೇ ಬಂಡವಾಳ ಹಿಂಪಡೆಯುವ ಕಾರ್ಖಾನೆಗಳ ಪಟ್ಟಿಯಿಂದ ಕೈಬಿಟ್ಟು ಕಾರ್ಖಾನೆಗೆ ಬಂಡವಾಳ ಹೂಡಿಕೆ ಮಾಡಲು ನಿರ್ದೇಶನ ನೀಡುವಂತೆ ಮನವಿ ಮಾಡಿದರು.

ವಿಐಎಸ್‌ಎಲ್ ಪುನಶ್ಚೇತನ ಸಂಬಂಧ ಬಿ.ಎಸ್.ಯಡಿಯೂರಪ್ಪ ಲೋಕಸಭಾ ಸದಸ್ಯರಾಗಿದ್ದ ಅವಧಿಯಿಂದಲೂ ಕೇಂದ್ರ ಹಾಗೂ ರಾಜ್ಯ ಸರ್ಕಾರದೊಂದಿಗೆ ನಡೆಸಿದ ಪ್ರಯತ್ನಗಳ ಬಗ್ಗೆ ಎಚ್‌ಡಿಕೆಗೆ ವಿವರಿಸಿದರು. ವಿಐಎಸ್‌ಎಲ್ ಪುನಶ್ಚೇತನದಿಂದ ಕರ್ನಾಟಕ ಮಾತ್ರವಲ್ಲದೆ ದೇಶದ ಆರ್ಥಿಕ ಬೆಳವಣಿಗೆಗೆ ಅನುಕೂಲವಾಗಲಿದೆ. ಭದ್ರಾವತಿ ತಾಲೂಕಿನ ಸಾವಿರಾರು ಕುಟುಂಬಗಳಿಗೆ ಸಹಕಾರಿಯಾಗುತ್ತದೆ ಎಂದು ಅಂಕಿಅಂಶದೊಂದಿಗೆ ಮಾಹಿತಿ ನೀಡಿದರು.
ರೈಲ್ವೆ ರಾಜ್ಯ ಸಚಿವ ವಿ.ಸೋಮಣ್ಣ, ವಿಐಎಸ್‌ಎಲ್ ನೌಕರರ ಸಂಘದ ಪದಾಧಿಕಾರಿಗಳಾದ ಜೆ.ಜಗದೀಶ, ಕೆ.ಬಿ.ಮಲ್ಲಿಕಾರ್ಜುನ, ಅಮೃತ್‌ಕುಮಾರ್, ಕೆ.ಆರ್.ಮನು, ಎಸ್.ಮೋಹನ್, ಎಸ್.ವಿನೋದ್‌ಕುಮಾರ್, ಜೆ.ಕಿರಣ್, ಆನಂದ್ ಮುಂತಾದವರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net