

ಅಳವಂಡಿ: ಲೀಸ್‌ಗೆ ಪಡೆದ ಜಮೀನಿನ ಬಾಡಿಗೆ ನೀಡುವಂತೆ ಒತ್ತಾಯಿಸಿ ಬೆಟಗೇರಿ ಗ್ರಾಮಸ್ಥರು ಗ್ರಾಮ ಸಮೀಪದ ಸನ್‌ಶ್ಯೂರ್ ಎನರ್ಜಿ ಕಂಪನಿ ಎದುರು ಗುರುವಾರ ಪ್ರತಿಭಟನೆ ನಡೆಸಿದರು. ಕಂಪನಿಯಲ್ಲಿ ಸ್ಥಳೀಯರಿಗೆ ಕೆಲಸ ನೀಡಬೇಕು.
ಗ್ರಾಮಕ್ಕೆ ಮೂಲ ಸೌಕರ್ಯ ಒದಗಿಸಬೇಕು. ಶುದ್ಧ ಕುಡಿವ ನೀರಿನ ಘಟಕ ಸ್ಥಾಪಿಸಬೇಕು. ಜಮೀನಿಗೆ ಹೋಗುವ ರಸ್ತೆ ಅಭಿವೃದ್ಧಿಪಡಿಸಬೇಕೆಂದು ಒತ್ತಾಯಿಸಿದರು.
ಪ್ರಮುಖರಾದ ಅಂದಾನಸ್ವಾಮಿ ಹಿರೇಮಠ, ಇಮಾಂಸಾಬ್, ವಿಜಯ ಯತ್ನಳ್ಳಿ, ಭೀಮಣ್ಣ ಕವಲೂರು, ರಮೇಶ, ಮಲ್ಲಪ್ಪ, ಯಂಕಣ್ಣ, ಹನುಮಂತ ಬೇಲಡಗಿ, ಶಿವು, ವೆಂಕಟೇಶ, ಶರಣಪ್ಪ, ಚಂದ್ರು, ವೀರಭದ್ರಪ್ಪ, ಏಳುಕೊಟೇಶ, ಬಸವರಾಜ ಇದ್ದರು.