ರೈತರ ಬೇಡಿಕೆ ಈಡೇರಿಸಲು ಮನವಿ

Appeal to fulfill farmers' demands
Published on

ಶಿಗ್ಗಾಂವಿ: ಶಿಗ್ಗಾವಿ, ಸವಣೂರ ತಾಲೂಕಿನ ರೈತರ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ರೈತ ಸಂಘದ ತಾಲೂಕು ಘಟಕದ ಕಾರ್ಯಕರ್ತರು ಶಾಸಕ ಯಾಸೀರಖಾನ್ ಪಠಾಣ ಅವರ ಮನೆ ಮುಂದೆ ಗುರುವಾರ ಧರಣಿ ನಡೆಸಿ, ಮನವಿ ಸಲ್ಲಿಸಿದರು.

ರೈತರ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಸಂಪರ್ಕಕ್ಕೆ ಆರ್‌ಆರ್ ನಂಬರ್ ಕೊಡುವುದು. ತಾಲೂಕಿನ ರೈತರಿಂದ ಕಬ್ಬ ಪಡೆದು ಹಣ ಬಾಕಿ ಉಳಿಸಿಕೊಂಡಿರುವ ವಿಐಎನ್‌ಪಿ, ಮೈಲಾರ ಶುಗರ್ ಕಾರ್ಖಾನೆಗಳಿಂದ ಪಾವತಿಸಲು ಕ್ರಮ, ಬೆಳೆ ಹಾನಿ, ಬೆಳೆ ವಿಮೆ ಬಾಕಿ ಜಮೆ, ಮೊದಲಿನಂತೆ ಪ್ರತಿ ಮೂರು ವರ್ಷಗಳಿಗೊಮ್ಮೆ ಕೃಷಿ ಇಲಾಖೆಯಿಂದ ಯಂತ್ರೋಪಕರಣಗಳನ್ನು ಸಹಾಯಧನದಡಿ ಒದಗಿಸುವುದು, ಗಂಗಾ ಕಲ್ಯಾಣ ಯೋಜನೆ ಸೌಲಭ್ಯ ಒದಗಿಸಿಕೊಡಬೇಕು ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ಶಾಸಕರ ಆಪ್ತ ಸಹಾಯಕ ಮನವಿ ಸ್ವೀಕರಿಸಿ, ಶಾಸಕರ ಗಮನಕ್ಕೆ ತರುವ ಭರವಸೆ ನೀಡಿದರು. ಮುತ್ತಣ್ಣ ಗುಡಗೇರಿ, ಮಾಲತೇಶ ಬಾರಕೇರ, ಈರಣ್ಣ ಸುಣಗಾರ, ಫಕೀರಪ್ಪ ಗಾಣಗೇರ, ಲಿಂಗರಾಜ ಜೋಗಿ, ಪಂಚಾಕ್ಷರಿ ಹಿರೇಮಠ, ಸಂಘಟನೆಯ ಪದಾಽಕಾರಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net