

ಹಾಸನ: ಲಾಕ್‌ಡೌನ್‌ನಿಂದ ಸಂಕಷ್ಟಕ್ಕೆ ಸಿಲುಕಿರುವ ಕಲಾವಿದರ ಕುಟುಂಬಗಳಿಗೆ ಆರ್ಥಿಕ ನೆರವು ನೀಡಬೇಕೆಂದು ಆಗ್ರಹಿಸಿ ಜಿಲ್ಲೆಯ ಜಾನಪದ, ವೃತ್ತಿಪರ ಕಲಾವಿದರು ಮಂಗಳವಾರ ಅಪರ ಜಿಲ್ಲಾಧಿಕಾರಿ ಕವಿತಾ ರಾಜಾರಾಂ ಅವರಿಗೆ ಮನವಿ ಸಲ್ಲಿಸಿದರು.
ಜಾನಪದ ಕಲೆಯನ್ನು ನಂಬಿ ಬದುಕುತ್ತಿರುವ ನೂರಾರು ಕುಟುಂಬ ಕೆಲಸವಿಲ್ಲದೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. ಕೋಲಾಟ, ಚೆಟ್ಟಿ ಮೇಳ, ಸುಗಮ ಸಂಗೀತ, ತೊಗಲು ಗೊಂಬೆ, ನಾಗಸ್ವರ, ನಂದಿ ಧ್ವಜ, ಕೀಲು ಕುದುರೆ, ಪೌರಾಣಿಕ ನಾಟಕ, ಬೀದಿ ನಾಟಕ, ಡೊಳ್ಳು ಕುಣಿತ, ಪೂಜಾ ಕುಣಿತ, ಸೋಬಾನೆ ಪದ, ಕರಪಾಲ ಮೇಳ ಹೀಗೆ ವಿವಿಧ ರೀತಿಯ 18 ರಿಂದ 20 ಕಲಾಪ್ರಕಾರಗಳಿಗೆ ಕಾರ್ಯಕ್ರಮವಿಲ್ಲದೆ ತೊಂದರೆಯಾಗಿದೆ ಎಂದರು.
ಸರ್ಕಾರ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಬೇಕು. ಪ್ರತಿ ಕಲಾವಿದರೆ ತಲಾ ಎರಡು ಸಾವಿರ ರೂ. ಪರಿಹಾರ ಘೋಷಿಸಬೇಕು ಎಂದು ಆಗ್ರಹಿಸಿದರು. ಸ್ವಾತಂತ್ರೃ ಹೋರಾಟಗಾರ ಎಚ್.ಎಂ. ಶಿವಣ್ಣ, ಜಾನಪದ ಕಲಾವಿದರಾದ ಬಿ.ಟಿ. ಮಾನವ, ವಸಂತ ಕುಮಾರ್, ನೀಲಮ್ಮ ಹಾಗೂ ಇತರರಿದ್ದರು.