

ಕಲ್ಕುಂದ: ಸ್ನೇಹಿತರೊಂದಿಗೆ ಬೆಂಗಳೂರಿಗೆ ಹೋಗಿ ಬರುವುದಾಗಿ ಹೇಳಿ 2023ರ ಮಾ.10ರಂದು ಮನೆಯಿಂದ ಹೋದ ಬೊಗಯ್ಯನ ಹುಂಡಿ ಗ್ರಾಮದ ನಿವಾಸಿ ಸಿದ್ದರಾಜು (60) ಈವರೆಗೂ ವಾಪಸ್ ಬರದಿರುವ ಕುರಿತು ಬಿಳಿಗೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚಹರೆ: ಮನೆಯಿಂದ ಹೊರಹೋಗುವಾಗ ಬೂದು ಬಣ್ಣದ ಪ್ಯಾಂಟ್ ಧರಿಸಿದ್ದು, ಕಪ್ಪು ಮೈಬಣ್ಣ ಹೊಂದಿದ್ದಾರೆ. ಬಿಳಿ ತಲೆ ಕೂದಲು ಇದ್ದು, ಇವರು ಪತ್ತೆಯಾದಲ್ಲಿ ದೂರವಾಣಿ ಸಂಖ್ಯೆ 08221-221745, 226226 ಗೆ ಕರೆಮಾಡುವಂತೆ ಪ್ರಕಟಣೆ ತಿಳಿಸಿದೆ.