ಮೂಲಸೌಲಭ್ಯಕ್ಕೆ ಒತ್ತಾಯಿಸಿ ಉಪ ಆಯುಕ್ತರಿಗೆ ಮನವಿ

RAICHUR
RAICHUR
Published on

ರಾಯಚೂರು ದೇವಿ ನಗರ ಹಾಗೂ ಚಂದ್ರ ಬಂಡಾ ರಸ್ತೆಯಲ್ಲಿರುವ ಸಿದ್ರಾಮೇಶ್ವರ ಬಡಾವಣೆಯಲ್ಲಿ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಒತ್ತಾಯಿಸಿ ದಲಿತ ಮತ್ತು ಪ್ರಗತಿಪರ ಸಂಘಟನೆಗಳ ಒಕ್ಕೂಟದ ವತಿಯಿಂದ ಬುಧವಾರ ಮಹಾನಗರ ಪಾಲಿಕೆ ಉಪ ಆಯುಕ್ತ ಗುರುಸಿದ್ದಯ್ಯ ಹಿರೇಮಠ ಅವರಿಗೆ ಮನವಿ ಸಲ್ಲಿಸಿದರು.

ಸಿದ್ರಾಮೇಶ್ವರ ಬಡಾವಣೆಯಲ್ಲಿ ಕುಡಿಯುವ ನೀರು, ಸಮರ್ಪಕ ರಸ್ತೆ, ಚರಂಡಿ ಕಾಲುವೆ, ವಿದ್ಯುತ್ ದೀಪ, ಸೇರಿದಂತೆ ಇತರೆ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಡಬೇಕು, ಈ ಬಡಾವಣೆಯಲ್ಲಿ ಕೆಲ ರಾಜಕೀಯ ಮುಖಂಡ ಹಿಂಬಾಲಕರು ದೌರ್ಜನ್ಯ ಮಾಡುತ್ತಿದ್ದು ಕ್ರಮ ಕೈಗೊಳ್ಳಬೇಕು, ಬಡವರಿಗೆ ಕಾನೂನು ರಕ್ಷಣೆ ನೀಡಬೇಕು. ಸರ್ಕಾರಿ ಜಾಗವನ್ನು ಹದ್ದುಬಸ್ತು ಮಾಡಿಸಿ ಕೂಡಲೇ ತಹಶೀಲ್ದಾರರು, ಮಹಾನಗರಪಾಲಿಕೆಯ ಅಽಕಾರಿಗಳು ಜಂಟಿ ಪರಿಶೀಲನೆಗೆ ಮುಂದಾಗಿ ಬಡವರಿಗೆ ನ್ಯಾಯ ಒದಗಿಸಬೇಕು ಎಂದು ಮನವಿ ಮಾಡಿದರು.

ಬೇಸಿಗೆ ಇರುವುದರಿಂದ ತಾತ್ಕಾಲಿಕವಾಗಿ ಮಹಾನಗರ ಪಾಲಿಕೆಯ ಅನುದಾನದಲ್ಲಿ ನೀರಿನ ಟ್ಯಾಂಕರ್ ಮೂಲಕ ಸರಬರಾಜು, ಜೊತೆಗೆ ಬೋರ್‌ವೆಲ್‌ಗಳನ್ನು ಹಾಕಿಸಿಕೊಡಬೇಕು ಎಂದು ಒತ್ತಾಯಿಸಿದರು. ಎಲ್ಲಾ ಬೇಡಿಕೆಗೆ ಕ್ರಮ ಕೈಗೊಳ್ಳದಿದ್ದರೆ ಮಹಾ ನಗರ ಪಾಲಿಕೆ ವಿರುದ್ಧ ಚಕ್ರ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಹೇಮರಾಜ ಅಸ್ಕಿಹಾಳ, ಚಂದ್ರು, ಅನ್ವರ್, ಶ್ರೀನಿವಾಸ ಕೊಪ್ಪರ, ಆಂಜನೇಯ ಕುರುಬದೊಡ್ಡಿ, ಶ್ರೀನಿವಾಸ ಕಲವಲದೊಡ್ಡಿ, ಪ್ರಸಾದ್ ಸೇರಿ ಅನೇಕರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net