

ಚಿತ್ರದುರ್ಗ: ಚಿತ್ರದುರ್ಗ ತಾಲೂಕು ಎರೇಹಳ್ಳಿ,ಕೆನ್ನೆಡಲು ಗ್ರಾಮಗಳಲ್ಲಿರುವ ಮೂಲ ಸೌಕರ್ಯಗಳ ಸಮಸ್ಯೆಗಳನ್ನು ನಿವಾರಿಸುವಂತೆ ಒತ್ತಾಯಿಸಿ ಆಮ್ ಆದ್ಮಿ ಪಾರ್ಟಿ ಪ್ರಮುಖರು ಮಂಗಳವಾರ ಡಿಸಿ ಜಿಆರ್‌ಜೆ ದಿವ್ಯಾಪ್ರಭು ಅವರಿಗೆ ಮನವಿ ಸಲ್ಲಿಸಿದರು. ಸ್ವಾತಂತ್ರೃ ಬಂದ ಅಂದಿ ನಿಂದಲೂ ಈ ಗ್ರಾಮಗಳಲ್ಲಿ ವಿದ್ಯುತ್,ಸಾರಿಗೆ ಮೊದಲಾದ ಮೂಲ ಸೌಕರ್ಯಗಳ ಕೊರತೆ ಇದೆ.
ಮೊಬೈಲ್ ಟವರ್ ನಿರ್ಮಿಸದೆ ಇರುವುದರಿಂದಾಗಿ ಮೊಬೈಲ್ ಸಂಪರ್ಕವೂ ಗ್ರಾಮಗಳಲ್ಲಿ ಇಲ್ಲವಾಗಿದೆ. ಆದ್ದರಿಂದ ತಾವು ಈ ನಿಟ್ಟಿ ನಲ್ಲಿ ಗಮನ ಹರಿಸಿ ಗ್ರಾಮಸ್ಥರ ಸಮಸ್ಯೆಗಳಿಗೆ ಸ್ಪಂದಿಸ ಬೇಕೆಂದು ಆಗ್ರಹಿಸಿದರು. ಪಾರ್ಟಿ ಜಿಲ್ಲಾಧ್ಯಕ್ಷ ಬಿ.ಇ.ಜಗದೀಶ್,ಎಚ್.ಎಂ.ಫಾರೂ ಕ್,ಪಿ.ರಾಧಾ,ಕೆಂಚಪ್ಪ,ಲೋಕೇಶಪ್ಪ,ಮೇಘನಾ,ಮೊಹಮ್ಮದ್ ಗೌಸ್,ಷಾ ಮೀರ್,ತಿಪ್ಪೇಸ್ವಾಮಿ,ಸಂತೋಷ್ ಇದ್ದರು.