ಒಎಫ್​ಸಿ ಕೇಬಲ್ ಅಳವಡಿಕೆಗೆ ಕಡಿವಾಣ ಹಾಕಲು ಮನವಿ

Vijayavani-Featured-Image
Published on

ಬೆಂಗಳೂರು: ನಗರದ ಎಲ್ಲೆಡೆ ವಿವಿಧ ಟೆಲಿಕಾಂ ಕಂಪನಿಗಳಿಂದ ಒಎಫ್​​ಸಿ ಕೇಬಲ್ ಅಳವಡಿಸುತ್ತಿರುವ ಕಾರಣ ದೊಡ್ಡ ಮಟ್ಟದಲ್ಲಿ ರಸ್ತೆಗುಂಡಿಗಳು ಉಂಟಾಗುತ್ತಿವೆ. ಇದರಿಂದ ರಸ್ತೆಗಳು ಹಾಳಾಗುವ ಜತೆಗೆ ಸಾರ್ವಜನಿಕರು ವಿನಾಕಾರಣ ತೊಂದರೆ ಅನುಭವಿಸುತ್ತಿರುವುದರಿಂದ ಅನಗತ್ಯ ಕೇಬಲ್ ಅಳವಡಿಕೆಗೆ ತಡೆ ಹಾಕಬೇಕು ಎಂದು ಮಾಜಿ ಶಾಸಕ ಆರ್.ಮಂಜುನಾಥ್ ಅವರು ಸಿಎಂ ಹಾಗೂ ಡಿಸಿಎಂಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.

ಖಾಸಗಿ ಒಎಫ್​ಸಿ ಕಂಪನಿಗಳು ನೆಪ ಮಾತ್ರಕ್ಕೆ ಪಾಲಿಕೆಯಿಂದ ಅನುಮತಿ ಪಡೆದು ಅನಧಿಕೃತವಾಗಿ ಹೆಚ್ಚು ವಿಸ್ತೀರ್ಣದಲ್ಲಿ ಕೇಬಲ್‌ಗಳನ್ನು ಅಳವಡಿಸುತ್ತಿವೆ. ಇದಕ್ಕೆ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ಆಮಿಷ ಒಡ್ಡುವ ವಾಮಮಾರ್ಗವನ್ನು ಅನುಸರಿಸುತ್ತಿವೆ. ಈ ಕಾರಣದಿಂದಾಗಿ ಆ ಕಂಪನಿಗಳು ಮನಸೋಇಚ್ಛೆ ರಸ್ತೆಗಳನ್ನು ಅಗೆದು ಹಾಳುಗೆಡುವುತ್ತಿವೆ.

ರಸ್ತೆಅಗೆತದ ಬಳಿಕ ಅಂತಹ ರಸ್ತೆಗಳು ದುರಸ್ತಿ ಆಗದೆ ವಾಹನ ಸವಾರರು ಭಾರಿ ಸಮಸ್ಯೆ ಎದುರಿಸುವಂತಾಗಿದೆ. ಈ ವಿಚಾರಿವಾಗಿ ಪಾಲಿಕೆಯ ಮುಖ್ಯ ಆಯುಕ್ತರಿಗೆ ಹಿಂದೊಮ್ಮೆ ಪತ್ರ ಬರೆದಿದ್ದರೂ, ಯಾವುದೇ ಕ್ರಮ ಕೈಗೊಂಡಿಲ್ಲ. ಹಾಗಾಗಿ ಕೇಬಲ್ ಅಳವಡಿಕೆಗೆ ಕಡಿವಾಣ ಹಾಕಲು ಬಿಬಿಎಂಪಿ ಮುಖ್ಯ ಆಯುಕ್ತರಿಗೆ ನಿದೇರ್ಶನ ನೀಡಬೇಕು ಎಂದು ಶಾಸಕರು ಸಿಎಂ ಹಾಗೂ ಡಿಸಿಎಂ ಅವರನ್ನು ಕೋರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net