ಮಹದಾಯಿ ಹೋರಾಟಗಾರರಿಂದ ಸಿಎಂ ಸಿದ್ದರಾಮಯ್ಯಗೆ ಮನವಿ

11 NRD- 5
ಮಹದಾಯಿ ಯೋಜನೆ ಜಾರಿಗೊಳಿಸುವಂತೆ ನರಗುಂದದ ರೈತರ ನಿಯೋಗವು ಶಾಸಕ ವಿನಯ ಕುಲಕರ್ಣಿ, ಕೆಪಿಸಿಸಿ ಸಂಯೋಜಕ ಡಾ. ಸಂಗಮೇಶ ಕೊಳ್ಳಿಯವರ ಸಮ್ಮುಖದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸೋಮವಾರ ಮನವಿ ಸಲ್ಲಿಸಿತು.
Published on

ನರಗುಂದ: ಉತ್ತರ ಕರ್ನಾಟಕದ ಬಹುದಿನಗಳ ಬೇಡಿಕೆಯಾದ ಮಹದಾಯಿ, ಕಳಸಾ ಬಂಡೂರಿ ನಾಲಾ ಜೋಡಣೆ ಯೋಜನೆಯ ಜಾರಿಗೊಳಿಸುವಂತೆ ಶಾಸಕ ವಿನಯ ಕುಲಕರ್ಣಿ, ಕೆಪಿಸಿಸಿ ಸಂಯೋಜಕ ಡಾ. ಸಂಗಮೇಶ ಕೊಳ್ಳಿಯವರ ಹಾಗೂ ಹೋರಾಟಗಾರ ವಿಜಯ ಕುಲಕರ್ಣಿ ನೇತೃತ್ವದ ರೈತರ ನಿಯೋಗವು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬೆಂಗಳೂರಿನಲ್ಲಿ ಸೋಮವಾರ ಮನವಿ ಸಲ್ಲಿಸಿತು.

ರೈತರ ಮನವಿಗೆ ಸ್ಪಂದಿಸಿರುವ ಸಿಎಂ ಸಿದ್ದರಾಮಯ್ಯ, ಯೋಜನೆಯ ಅನುಷ್ಠಾನಗೊಳಿಸುವ ಬಗ್ಗೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳುವ ಭರವಸೆ ನೀಡಿದರು ಎಂದು ಡಾ. ಸಂಗಮೇಶ ಕೊಳ್ಳಿಯವರ ‘ವಿಜಯವಾಣಿ’ಗೆ ತಿಳಿಸಿದ್ದಾರೆ.

ನರಗುಂದ ಪುರಸಭೆ ಮಾಜಿ ಉಪಾಧ್ಯಕ್ಷ ಬಿ.ಡಿ. ಪಾಟೀಲ, ಕಣಕೀಕೊಪ್ಪ ಗ್ರಾಪಂ ಉಪಾಧ್ಯಕ್ಷ ವಿನಯಕುಮಾರ ಪಾಟೀಲ, ಮೆಣಸಗಿ ಗ್ರಾಪಂ ಸದಸ್ಯ ಯಲ್ಲಪ್ಪ ಯಲಿಗಾರ, ಅಶೋಕ ಉಡಕೇರಿ, ತಿಪ್ಪನಗೌಡ ಕಲ್ಲನಗೌಡ್ರ, ಪ್ರಕಾಶ ಹುಂಬಿ, ಮುತ್ತಣ್ಣ ಹರ್ತಿ, ಡಾ. ಈರಣ್ಣ ಬಂಕಾಪುರ, ಫಾರೂಕ್ ಮಜ್ಜೀದಮನಿ, ರಾಜುಗೌಡ ಹಿರೇಗೌಡ್ರ, ಶಂಕರಗೌಡ ಪೊಲೀಸ್‌ಪಾಟೀಲ, ಹೊಳಗಿ, ಅನಿಲ ಪೇಠೆ, ಮುತ್ತು ಕಬಾಡ್ರ, ಪ್ರಸಾದ ಮುತ್ತಿನ, ಮಕ್ತುಂ ಮುಲ್ಲಾನವರ, ಪ್ರವೀಣ ಮ್ಯಾಗೇರಿ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net