

ಬೇಲೂರು: ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘಕ್ಕೆ ಸೇರಿದ ನೆಹರೂ ನಗರದಲ್ಲಿರುವ 3.16 ಎಕರೆ ಜಾಗದಲ್ಲಿ 16 ಗುಂಟೆ ಒತ್ತುವರಿಯಾಗಿದ್ದು, ಅದನ್ನು ಬಿಡಿಸಿಕೊಡಬೇಕೆಂದು ಇತ್ತೀಚೆಗೆ ಶಾಸಕ ಎಚ್.ಕೆ.ಸುರೇಶ್ ಅವರಿಗೆ ಸಂಘದ ಅಧ್ಯಕ್ಷ ಎಂ.ಕೆ.ಆರ್.ಸೋಮೇಶ್ ಮನವಿ ಸಲ್ಲಿಸಿದರು.
ಮನವಿ ಪತ್ರ ಸ್ವೀಕರಿಸಿ ಮಾತನಾಡಿದ ಶಾಸಕ ಎಚ್.ಕೆ.ಸುರೇಶ್, ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘಕ್ಕೆ ಸೇರಿದ ಆಸ್ತಿ ಒತ್ತುವರಿ ವಿಚಾರ ಗಮನಕ್ಕೆ ಬಂದಿದ್ದು, ಸರ್ಕಾರದ ಆಸ್ತಿ ಉಳಿಸಲು ಆಡಳಿತ ಮಂಡಳಿ ಮುಂದಾಗಿರುವುದು ಶ್ಲಾಘನೀಯ. ಅಲ್ಲದೆ ಒತ್ತುವರಿಗೆ ಸಂಬಂಧಿಸಿದಂತೆ ತಹಸೀಲ್ದಾರ್ ಹಾಗೂ ಪುರಸಭೆ ಅಧಿಕಾರಿಗಳಿಗೆ ತಿಳಿಸಿ ಶೀಘ್ರ ಸರ್ವೇ ಮಾಡಿಸಿ ತೆರವಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಕಾರ್ಯದರ್ಶಿ ದೀಪು ಇದ್ದರು.