ಕಾಡಾನೆ ಹಾವಳಿ ತಪ್ಪಿಸಲು ಒತ್ತಾಯಿಸಿ ಮನವಿ

12 ckm 4
ಚಿಕ್ಕಮಗಳೂರು ಡಿಎಫ್‌ಒ ರಮೇಶ್ ಬಾಬು ಅವರಿಗೆ ಮನವಿ ಸಲ್ಲಿಸಿದ ಹೊಲದಗದ್ದೆ ಗ್ರಾಮದ ಬೆಳೆಗಾರರು ಕಾಡಾನೆ ಹಾವಳಿ ನಿಯಂತ್ರಿಸಬೇಕು ಎಂದು ಒತ್ತಾಯಿಸಿದರು. ಹೊಲದಗದ್ದೆ ಗಿರೀಶ್, ವಿಜಯ್ ರಾಜ್ ಪೂರ್ಣೇಶ್, ಎಚ್.ಎಂ.ಸ್ವರೂಪ್, ವೆಂಕಟೇಶ್ ಮಾನ್ವಿತ್, ಪ್ರಸನ್ನ ಉಪಸ್ಥಿತರಿದ್ದರು.
Published on

ಚಿಕ್ಕಮಗಳೂರು: ಮಲ್ಲಂದೂರು, ಹೊಲದಗದ್ದೆ ಭಾಗದಲ್ಲಿ ಕಳೆದ ಹಲವು ತಿಂಗಳುಗಳಿAದ ಕಾಡಾನೆಗಳ ಹಾವಳಿ ಹೆಚ್ಚಾಗಿದ್ದು, ಕಾಡಾನೆಗಳನ್ನು ಸ್ಥಳಾಂತರಿಗೆ ಕಾಫಿ ತೋಟಗಳ ಮಾಲೀಕರು, ಕಾರ್ಮಿಕರು ಹಾಗೂ ಸ್ಥಳೀಯ ನಿವಾಸಿಗಳಿಗೆ ಅನುಕೂಲ ಒದಗಿಸಿಕೊಡಬೇಕು ಎಂದು ಆಗ್ರಹಿಸಿ ಹೊಲದಗದ್ದೆ ಭಾಗದ ಗ್ರಾಮಸ್ಥರು ಗುರುವಾರ ಡಿಎಫ್‌ಓ ರಮೇಶ್ ಬಾಬು ಅವರಿಗೆ ಮನವಿ ಸಲ್ಲಿಸಿದರು.

ಈ ವೇಳೆ ಮಾತನಾಡಿದ ಬೆಳೆಗಾರರ ಹಿತರಕ್ಷಣಾ ವೇದಿಕೆ ಜಿಲ್ಲಾ ಕಾರ್ಯದರ್ಶಿ ಹೊಲದಗದ್ದೆ ಗಿರೀಶ್, ಮೇಲುಹೊಲದಗದ್ದೆ, ತೋÃಟದಮಕ್ಕಿ ಹಾಗೂ ಕೊಂಡದಖಾನ್ ಗ್ರಾಮದಲ್ಲಿ ಈಗಾಗಲೇ ಮರ‍್ನಾಲ್ಕು ತಿಂಗಳುಗಳಿAದ ಕಾಡಾನೆ ದಾಳಿ ವಿಪರೀತವಾಗಿದೆ. ಕಾಫಿ, ಅಡಿಕೆ, ಬಾಳೆ ಮುಂತಾದ ಬೆಳೆಗಳನ್ನು ನಾಶ ಮಾಡುತ್ತಿವೆ ಎಂದು ದೂರಿದರು.
ಆನೆಗಳ ಹಾವಳಿ ಬಗ್ಗೆ ಹಲವು ಬಾರಿ ಅರಣ್ಯ ಇಲಾಖೆಗೆ ಮಾಹಿತಿ ನೀಡಿದರೂ ಸಂಬAಧಿಸಿದ ಅಧಿಕಾರಿ ಹಾಗೂ ಸಿಬ್ಬಂದಿ ಸ್ಥಳಿಯರಿಗೆ ಸ್ಪಂದಿಸುತ್ತಿದ್ದಾರೆಯೇ ಹೊರತು ಕಾಡಾನೆಗಳನ್ನು ಬೇರೆಡೆ ಸ್ಥಳಾಂತರಿಸಲು ಯಾವುದೇ ಕ್ರಮ ಕೈಗೊಂಡಿಲ್ಲ. ಕಾಡಾನೆಗಳ ಹಾವಳಿಯಿಂದ ಗ್ರಾಮಸ್ಥರು ಜೀವನ ನಡೆಸುವುದೇ ದುಸ್ಥರವಾಗಿದೆ. ಪ್ರತಿದಿನವೂ ಹಗಲು- ರಾತ್ರಿ ಎನ್ನದೇ ರೈತರು, ಕಾರ್ಮಿಕರು ಜೀವಭಯದಲ್ಲಿ ಬದುಕುವ ವಾತಾವರಣ ಸೃಷ್ಟಿಯಾಗಿದೆ. ಪ್ರತಿಯೊಬ್ಬರ ಮನೆಯ ಸಮೀಪ ಪ್ರತಿ ದಿನ ಪಟಾಕಿ ಹೊಡೆದು ರಕ್ಷಣೆ ಪಡೆದುಕೊಳ್ಳಬೇಕಾದ ಸ್ಥಿತಿ ನಿರ್ಮಾಣವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮಲಂದೂರು ಭಾಗದಲ್ಲಿರುವ ಕಾಡಾನೆಗಳನ್ನು ಅರಣ್ಯಕ್ಕೆ ಸ್ಥಳಾಂತರಿಸಬೇಕು. ಇಲ್ಲದಿದ್ದಲ್ಲಿ ಗ್ರಾಮಸ್ಥರಿಗೆ ಸೂಕ್ತವಾದ ಪರಿಹಾರ ನೀಡಿದರೆ ಗ್ರಾಮವನ್ನು ತೊರೆಯುವ ತೀರ್ಮಾನಕ್ಕೆ ಬಂದಿz್ದೆÃವೆ. ಆನೆಗಳನ್ನು ಹಿಡಿದು ಬೇರೆಡೆ ಸ್ಥಳಾಂತರಿಸಿದರೆ ಗ್ರಾಮಸ್ಥರಿಗೆ ಶಾಶ್ವತ ಪರಿಹಾರ ಸಿಗಲಿದೆ ಎಂದರು.
ಟ್ರೆAಚ್ ಹೊಡಿಯುವುದು, ಬೇಲಿ ನಿರ್ಮಿಸುವ ಯೋಜನೆಗಳನ್ನು ಕಾರ್ಯರೂಪಕ್ಕೆ ತಂದಲ್ಲಿ ಗ್ರಾಮಸ್ಥರು ನಿಟ್ಟಿಸಿರು ಬಿಡಬಹುದು. ಜಿಲ್ಲೆಯ ಪ್ರಭಾವಿ ರಾಜಕಾರಣಿಯೊಬ್ಬರು ಮುತ್ತೋಡಿ ಅಭಯಾರಣ್ಯದ ಹೃದಯ ಭಾಗದಲ್ಲಿ ಕಾಫಿ ತೋಟ ಹೊಂದಿದ್ದು, ಅಲ್ಲಿ ಹೆಲಿಪ್ಯಾಡ್ ನಿರ್ಮಾಣ ಸೇರಿದಂತೆ ಇನ್ನಿತರೆ ಯೋಜನೆಗಳನ್ನು ಕೈಗೊಂಡಿರುವ ಪರಿಣಾಮ ಕಾಡುಪ್ರಾಣಿಗಳು ಊರಿಗೆ ಬರುವಂತಾಗಿದೆ ಎಂದು ಆರೋಪಿಸಿದರು.
ಕಾಡಿನಲ್ಲಿ ಆಹಾರವಿಲ್ಲದೇ ಪರದಾಡುವ ಪರಿಸ್ಥಿತಿಗೆ ಪ್ರಾಣಿಗಳು ಬಂದಿವೆ. ಪ್ರತಿ ವರ್ಷ ವನ್ಯಪ್ರಾಣಿ ಸಂರಕ್ಷಣೆಗೆAದು ಹಾಗೂ ಹಣ್ಣಿನ ಗಿಡಗಳನ್ನು ಬೆಳೆಸಲೆಂದು ಹಾಗೂ ಇನ್ನಿತರ ಅರಣ್ಯ ಅಭಿವೃದ್ದಿಗಾಗಿ ಇಲಾಖೆಗೆ ಬರುವ ಅನುದಾನ ಎಲ್ಲಿಗೆ ಹೋಗುತ್ತಿದೆ ಎಂಬುದು ತಿಳಿಯುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಅರಣ್ಯಾಧಿಕಾರಿ ರಮೇಶ್ ಬಾಬು, ಕಾಡಾನೆಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ತಂತಿ ಬೇಲಿ ನಿರ್ಮಿಸಲಾಗುವುದು. ಅಲ್ಲದೇ ಮರ‍್ನಾಲ್ಕು ತಂಡಗಳನ್ನು ರಚಿಸಿ ಆಯಾಯ ಸ್ಥಳಗಳಿಗೆ ಸಿಬ್ಬಂದಿಗಳೊAದಿಗೆ ಭೇಟಿ ನೀಡುವ ಮೂಲಕ ಕಾಡಾನೆಗಳನ್ನು ಬೇರೆಡೆ ಸ್ಥಳಾಂತರಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಮನವಿ ಸಲ್ಲಿಸುವ ಸಂದರ್ಭದಲ್ಲಿ ಗ್ರಾಮಸ್ಥರಾದ ವಿನಯ್ ರಾಜ್ ಪೂರ್ಣೇಶ್, ಎಚ್.ಎಂ.ಸ್ವರೂಪ್, ವೆಂಕಟೇಶ್ ಮಾನ್ವಿತ್, ಪ್ರಸನ್ನ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net