ವಿವಿಧ ಬೇಡಿಕೆ ಈಡೇರಿಸಲು ಪಿಎಸ್‌ಟಿ ಶಿಕ್ಷಕರ ಮನವಿ

Appeal of PST teachers to fulfill various demands
Published on

ಸವಣೂರ: ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಘಟಕದ ಪದಾಧಿಕಾರಿಗಳು ಮಂಗಳವಾರ ಬಿಇಒ ಎಂ.ಎಫ್. ಬಾರ್ಕಿ ಅವರಿಗೆ ಮನವಿ ಸಲ್ಲಿಸಿದರು.

ರಾಜ್ಯದಲ್ಲಿ 2016ಕ್ಕಿಂತ ಪೂರ್ವದಲ್ಲಿ ನೇಮಕವಾದ ಶಿಕ್ಷಕರನ್ನು ಪ್ರಾಥಮಿಕ ಶಾಲಾ 1 ರಿಂದ 8ನೇ ತರಗತಿಗೆ ವಿಲೀನಗೊಳಿಸುವುದು ಹಾಗೂ ಈಗಾಗಲೇ ಪದವಿ ಪಡೆದ ಶಿಕ್ಷಕರನ್ನು 6 ರಿಂದ 8 ತರಗತಿಗೆ ವಿಲೀನಗೊಳಿಸಿ (ಜಿಪಿಟಿ ಶಿಕ್ಷಕರೆಂದು ಪರಿಗಣಿಸಿ) ಆರ್ಥಿಕ ಬಡ್ತಿ ಸೌಲಭ್ಯ ನೀಡುವ ನಿಟ್ಟಿನಲ್ಲಿ ಪಿಎಸ್‌ಟಿ ಶಿಕ್ಷಕರಿಗೆ ಅನ್ಯಾಯವಾಗಿರುವುದರಿಂದ ಹೋರಾಟದ ಹಾದಿ ಅನಿವಾರ್ಯವಾಗಿರುತ್ತದೆ. ಆದ್ದರಿಂದ ಪೂರ್ವ ನಿಯೋಜಿತವಾಗಿ ಶೀಘ್ರವೇ ಪಿಎಸ್‌ಟಿ ಶಿಕ್ಷಕರ ಮಹತ್ತರ ಬೇಡಿಕೆಯಾಗಿರುವ ಸಿ ಮತ್ತು ಆರ್ ನಿಯಮ ತಿದ್ದುಪಡಿ ಬಗ್ಗೆ ಸಕಾರಾತ್ಮಕವಾದ ಸ್ಪಂದನೆ ಸಿಗದೇ ಹೋದರೆ ಮುಂದಿನ ದಿನಮಾನಗಳಲ್ಲಿ ಪಿಎಸ್‌ಟಿ ಶಿಕ್ಷಕರಾದ ನಾವೆಲ್ಲರೂ ತರಗತಿಗಳ ಬಹಿಷ್ಕಾರ ಹಾಗೂ ಅನಿರ್ದಿಷ್ಟಾವಧಿ ಮುಷ್ಕರ ನಡೆಸುವುದು ಅನಿವಾರ್ಯವಾಗಲಿದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ಸಂಘದ ತಾಲೂಕು ಘಟಕದ ಅಧ್ಯಕ್ಷ ಮುತ್ತಣ್ಣ ಚುರ್ಚಿ, ಉಪಾಧ್ಯಕ್ಷ ಎನ್.ವಿ. ಕಲಕೋಟಿ, ಕಾರ್ಯದರ್ಶಿ ಶಿವಯೋಗಿ ಆಲದಕಟ್ಟಿ, ಪದಾಧಿಕಾರಿಗಳಾದ ಮಂಜುನಾಥ ಅಕ್ಕಿ, ಸಂಗೀತಾ ರಜಪೂತ, ಅಶೋಕ ಹಾಡೋರ, ಶಾರದಾ ಗಾಯಕವಾಡ, ಕೆ.ಎಫ್. ಅಣ್ಣಿಗೇರಿ, ಎಸ್.ಬಿ. ಪಶುಪತಿಹಾಳ, ಎಂ.ಎ. ಮುಲ್ಲಾ, ಜಿ.ಆರ್. ಶಿರಹಟ್ಟಿಮಠ, ಎಸ್.ಟಿ. ಮಹಾಪುರುಷ, ಎಫ್.ಆರ್. ಹಿರೇಮಠ, ಎಂ.ಎಂ. ತಾಜೇವಾಲೆ, ಆರ್.ಕೆ. ಸಂಕನೂರ, ಎಸ್.ಬಿ. ದೊಡ್ಡಮನಿ, ಸಿ.ಎ. ಬೊಮ್ಮಕ್ಕನವರ, ಮಂಜುನಾಥ ಅಂಗಡಿ ಯಾಸ್ಮೀನಾಬಾನು ಯಳವತ್ತಿ ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net