ವಿವಿಧ ಬೇಡಿಕೆ ಈಡೇರಿಸಲು ಪೌರಕಾರ್ಮಿಕರ ಮನವಿ

h27=guntral
Published on

ಹುಬ್ಬಳ್ಳಿ: ಪಾಲಿಕೆಯ 870 ಪೌರಕಾರ್ಮಿಕರನ್ನು ಏಕಕಾಲಕ್ಕೆ ಕಾಯಂಗೊಳಿಸಬೇಕು, ಪಾಲಿಕೆ ಠರಾವು ಅನ್ವಯ 799 ಗುತ್ತಿಗೆ ಪೌರಕಾರ್ಮಿಕರಿಗೆ ನೇರವೇತನ ಪಾವತಿಸಬೇಕು ಹಾಗೂ ಪೌರಕಾರ್ಮಿಕರ ಬೇಡಿಕೆಗಳ ಕುರಿತು ಪಾಲಿಕೆಯ ಠರಾವುಗಳನ್ನು ಕೂಡಲೇ ಅನುಷ್ಠಾನಗೊಳಿಸಬೇಕೆಂದು ಒಒತ್ತಾಯಿಸಿ ಧಾರವಾಡ ಜಿಲ್ಲಾ ಪೌರ ಕಾರ್ಮಿಕರ ಸಂಘದ ಪದಾಧಿಕಾರಿಗಳು, ನಗರದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.

ಪಾಲಿಕೆಯ ಠರಾವಿನ ಅನ್ವಯ ಸಂಘಕ್ಕೆ ಕೊಠಡಿ ಒದಗಿಸಬೇಕು. ಕನಿಷ್ಠ ವೇತನ ವ್ಯತ್ಯಾಸ ಬಾಕಿ 9 ಕೋಟಿ ರೂ. ಪೌರಕಾರ್ಮಿಕರಿಗೆ ಪಾವತಿಸಬೇಕು. ತುಟ್ಟಿ ಭತ್ಯೆ ಬಾಕಿ 2 ಕೋಟಿ ರೂ. ಪೌರಕಾರ್ಮಿಕರಿಗೆ ಪಾವತಿಸಬೇಕು. ಸಂಕಷ್ಟ ಭತ್ಯೆ, ಬಿಬಿಎಂಪಿ ಮಾದರಿಯಂತೆ ಮೃತಪಟ್ಟ ಪೌರಕಾರ್ಮಿಕರ ಕುಟುಂಬಕ್ಕೆ 10 ಲಕ್ಷ ರೂ. ಪರಿಹಾರ, ಅವಲಂಬಿತರಿಗೆ ಕೆಲಸ, ನಿವೃತ್ತ ಪೌರಕಾರ್ಮಿಕರಿಗೆ 10 ಲಕ್ಷ ರೂ. ಪರಿಹಾರ ಮತ್ತು 5000 ರೂ. ಪ್ರತಿ ತಿಂಗಳು ನಿವೃತ್ತಿ ವೇತನ ಪಾವತಿಸಬೇಕು ಎಂದು ಮೇಯರ್ ರಾಮಪ್ಪ ಬಡಿಗೇರ, ಉಪಮೇಯರ್ ದುರ್ಗಮ್ಮ ಬಿಜವಾಡ ಹಾಗೂ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ ಅವರಿಗೆ ಪ್ರತ್ಯೇಕ ಮನವಿ ಸಲ್ಲಿಸಿ ಒತ್ತಾಯಿಸಲಾಯಿತು.

ಸಂಘದ ಅಧ್ಯಕ್ಷ ವಿಜಯ ಗುಂಟ್ರಾಳ, ಪ್ರಮುಖರಾದ ಹೊನ್ನಪ್ಪ ದೇವಗೇರಿ, ಬಸಪ್ಪ ಮಾದರ, ರಮೇಶ ರಾಮ್ಮಯ್ಯನವರ, ಗಂಗಮ್ಮ ಸಿದ್ರಾಮಪುರ, ಭಾಗ್ಯಲಕ್ಷ್ಮೀ ಮಾದರ, ಲಕ್ಷ್ಮೀ ವಾಲಿ, ನೀಲವ್ವ ಬೆಳವಟಗಿ, ಲಕ್ಷ್ಮೀ ಬೇತಾಪಲ್ಲಿ, ದತಪ್ಪ ಆಪುಸಪೇಟ್, ರಾಜು ನಾಗರಾಳ, ತಾಯಪ್ಪ ಕಾಣೆಕಲ, ಶರೀಫ್ ಮಸರಕಲ್, ರಮೇಶ ಗೊಲ್ಲರ, ವೆಂಕಟೇಶ ಪಾಲವಾಯಿ, ಪಾರವ್ವ ಹೊಸಮನಿ, ಅನಿತಾ ಇನಗೊಂಡ, ಜಮುನಾ ಬೆನಸಮಟ್ಟಿ, ಯಲಪ್ಪ ಪಾಳೇದ, ಗಂಗಾಧರ ದೊಡ್ಡಮನಿ, ಕಸ್ತೂರಿ ತಮದಡ್ಡಿ, ರೇಣುಕಾ ನಾಗರಾಳ, ಲಕ್ಷ್ಮೀಬಾಯಿ ಶಟಗೇರಿ, ರೇಣುಕಾ ಸಾಂಬ್ರಾಣಿ, ರಾಧಾ ಬಾಗಲಾಡ, ಅನ್ನಪೂರ್ಣ ಜಂಗ್ಲಿ, ಫಕೀರವ್ವ ಕಡಕೋಳ, ಲಕ್ಷ್ಮೀ ಭೀಮನಹಳ್ಳಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net