ಶಾಶ್ವತ ಪರಿಹಾರಕ್ಕೆ ಹರಿಜನ ಕೇರಿ ನಿವಾಸಿಗಳ ಮನವಿ

SVR MANAVI
Published on

ಸವಣೂರ: ತಾಲೂಕಿನ ಹತ್ತಿಮತ್ತೂರ ಕೆರೆ ಕೋಡಿ ಬಿದ್ದು ತಾಂಡಾದ ಹರಿಜನ ಕೇರಿಯ 40ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿ ಉಂಟಾಗಿರುವ ಹಾನಿಗೆ ಶಾಶ್ವತ ಪರಿಹಾರ ನೀಡಬೇಕು ಎಂದು ಸ್ಥಳೀಯ ನಿವಾಸಿಗಳು ಸೋಮವಾರ ತಹಸೀಲ್ದಾರ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಕಂದಾಯ ಇಲಾಖೆ ವಿಸ್ತೀರ್ಣಾಧಿಕಾರಿ ಎಂ.ವಿ. ಕರ್ಜಗಿ ಅವರಿಗೆ ಮನನವಿ ಸಲ್ಲಿಸಿದರು.

ನಿರಂತರ ಸುರಿಯುತ್ತಿರುವ ಮಳೆಗೆ ಕೆರೆ ತುಂಬಿ ಕೋಡಿ ಬಿದ್ದು ಅಕ್ಕ-ಪಕ್ಕದ ಮನೆಗೆ ನೀರು ನುಗ್ಗಿ ಅಪಾರ ಪ್ರಮಾಣದ ಹಾನಿಯಾಗಿದೆ. ಮನೆಯಲ್ಲಿದ್ದ ದವಸ-ಧಾನ್ಯ, ನಿತ್ಯ ಬಳಕೆಯ ಸಾಮಗ್ರಿಗಳು ಹಾಳಾಗಿವೆ. ಹರಿಜನಕೇರಿ ಸಂಪೂರ್ಣ ಜಲಾವೃತ್ತವಾಗಿ ಮನೆಗಳು ಕುಸಿಯುತ್ತಿವೆ. ಆದ್ದರಿಂದ, ತಹಸೀಲ್ದಾರ್ ಹಾಗೂ ಅಧಿಕಾರಿಗಳ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಹಾನಿಗೊಳಗಾದ ಕುಟುಂಬಸ್ಥರಿಗೆ ಸೂಕ್ತ ಪರಿಹಾರ ನೀಡಬೇಕು ಮನವಿಯಲ್ಲಿ ತಿಳಿಸಿದ್ದಾರೆ.

ಸ್ಥಳೀಯರಾದ ಶಾರವ್ವ ಕರಬಸಮ್ಮನವರ, ಗುಡ್ಡಪ್ಪ ಕರಬಸಮ್ಮನವರ, ನಾಗವ್ವ ಹುಣಿಸಿಮರದ, ಹನುಮಂತಪ್ಪ ಕರಬಸಮ್ಮನವರ, ಹುಲ್ಲಪ್ಪ ಕರಬಸಮ್ಮನವರ, ಲಕ್ಷ್ಮವ್ವ ವಾಳದವರ, ನಿಂಗವ್ವ ಹೊಸಮನಿ, ಮಾತೇಶ ವಡಕ್ಕಮ್ಮನವರ, ಹೇಗಪ್ಪ ವಡಕ್ಕಮ್ಮನವರ, ಇಂದ್ರವ್ವ ವಾಳದವರ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net