ಕೇಬಲ್ ತೆರವು ಮಾಡದಂತೆ ಕೇಬಲ್, ಆಪರೇಟರ್‌ಗಳ ಮನವಿ

Hrr Manave Sept 1
Published on

ಹರಿಹರ: ಬೆಸ್ಕಾಂ ವಿದ್ಯುತ್ ಕಂಬಗಳಿಗೆ ಕಟ್ಟಿರುವ ಒಎಫ್‌ಸಿ ಕೇಬಲ್, ಇಂಟರ್‌ನೆಟ್ ಕೇಬಲ್‌ಗಳನ್ನು ತೆರವುಗೊಳಿಸದಂತೆ ಆಗ್ರಹಿಸಿ ತಾಲೂಕು ಕೇಬಲ್, ಆಪರೇಟರ್‌ಗಳ ಸಂಘದವರು ಶಾಸಕ ಬಿ.ಪಿ.ಹರೀಶ್ ಅವರಿಗೆ ಶುಕ್ರವಾರ ಪ್ರವಾಸಿ ಮಂದಿರದಲ್ಲಿ ಮನವಿ ಸಲ್ಲಿಸಿದರು.

ಅನೇಕ ವರ್ಷಗಳಿಂದ ವಿದ್ಯುತ್ ಕಂಬಗಳ ಮೇಲೆ ಕಟ್ಟಿರುವ ಒಎಫ್‌ಸಿ ಕೇಬಲ್‌ಗಳ ಮೂಲಕ ಗ್ರಾಹಕರ ಮನೆಗಳಿಗೆ ಸೇವೆ ಸಲ್ಲಿಸುತ್ತ ಬದುಕು ಕಟ್ಟಿಕೊಂಡಿದ್ದೇವೆ. ಒಂದು ವಾರದಿಂದ ಬೆಸ್ಕಾಂ ಇಲಾಖೆಯು ವಿದ್ಯುತ್ ಕಂಬಗಳಿಗೆ ಕಟ್ಟಿರುವ ಕೇಬಲ್ ತೆರವುಗೊಳಿಸುವಂತೆ ನೋಟಿಸ್ ನೀಡಿದ್ದಾರೆ. ಇದರಿಂದ ನಾವು ಸಂಕಷ್ಟಕ್ಕೆ ಸಿಲುಕಿದ್ದು ದಿಕ್ಕುತೋಚದಂತಾಗಿದೆ. ಕೂಡಲೇ ಸಂಬಂಧಿತ ಇಲಾಖೆಗೆ ಸೂಚನೆ ನೀಡುವಂತೆ ಮನವಿ ಮಾಡಿದರು.

ಈ ವಿಷಯವಾಗಿ ಸಂಬಂಧಿತ ಅಧಿಕಾರಿಗಳಿಗೆ ತಕ್ಷಣದಿಂದಲೇ ವಿದ್ಯುತ್ ಕಂಬಗಳಿಗೆ ಕಟ್ಟಿರುವ ಕೇಬಲ್ ತೆರವುಗೊಳಿಸಿದಂತೆ ಸೂಚನೆ ನೀಡಬೇಕೆಂದು ಕೇಬಲ್ ಆಪರೇಟರ್‌ಗಳ ಸಂಘದ ಸದಸ್ಯರು ಶಾಸಕರಿಗೆ ಮನವಿ ಮಾಡಿಕೊಂಡರು.

ಮನವಿ ಸ್ವೀಕರಿಸಿದ ಶಾಸಕ ಬಿ.ಪಿ. ಹರೀಶ್ ಅವರು, ಈ ವಿಷಯವಾಗಿ ಸಂಬಂಧಿತ ಬೆಸ್ಕಾಂ ಅಧಿಕಾರಿಗಳೊಂದಿಗೆ ಚರ್ಚಿಸಿ ನಿಮಗೆ ಯಾವುದೇ ತೊಂದರೆ ಮಾಡದಂತೆ ಸೂಚಿಸುತ್ತೇನೆ ಎಂದು ಭರವಸೆ ನೀಡಿದರು.

ಗ್ರಾಮಾಂತರ ಪ್ರದೇಶದ ಜಿಲ್ಲಾಧ್ಯಕ್ಷ ಬಾತಿ ರಾಮಚಂದ್ರಪ್ಪ, ಮಂಜುನಾಥ್ ಹದಡಿ,ಕೊಂಡಜ್ಜಿ ಮಲ್ಲಿಕಾರ್ಜುನ, ಜಿ.ಕುಮಾರ ಗಂಗನರಸಿ, ಬನ್ನಿಕೊಡು ಎಲ್.ವಿ. ಸೋಮಶೇಖರಯ್ಯ, ಮಂಜುನಾಥ್ ಎಲ್. ಮೆಹರ‌್ವಾಡೆ, ಮೊಹಮ್ಮದ್ ರಫೀಕ್, ಕೃಷ್ಣ.ಸಾ.ರಾಜೋಳಿ, ರವಿ ಬೊಂಗಾಳೆ, ಪ್ರಶಾಂತ್ ಹನಗವಾಡಿ, ಶ್ರೀಧರ್, ಆರ್.ರಾಘವೇಂದ್ರ, ಗುಡ್ಯಪ್ಪ, ಆನಂದ, ಸಾರಥಿ ರವಿ, ಚಿಕ್ಕಬಿದರಿ ಬಸವರಾಜ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net