

ನರಗುಂದ: ಪಟ್ಟಣದ ಗಾಂಧಿ ಚೌಕ್‌ದಲ್ಲಿ ಗಾಂಧಿ ಪುತ್ಥಳಿ ನಿರ್ಮಿಸಬೇಕು ಎಂದು ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಪುರಸಭೆ ಮುಖ್ಯಾಧಿಕಾರಿ ಅಮಿತ್ ತಾರದಾಳೆ ಅವರಿಗೆ ಶುಕ್ರವಾರ ಮನವಿ ಸಲ್ಲಿಸಿದರು.
ಕನ್ನಡಪರ ಸಂಘಟನೆಗಳ ತಾಲೂಕು ಅಧ್ಯಕ್ಷ ಚನ್ನು ನಂದಿ ಮಾತನಾಡಿ, ಐತಿಹಾಸಿಕ ಹಿನ್ನೆಲೆ ಹೊಂದಿರುವ ಪಟ್ಟಣದ ಗಾಂಧಿ ಚೌಕ್ ಇತ್ತೀಚಿನ ದಿನಗಳಲ್ಲಿ ಬಹುಮಹಡಿ ಕಟ್ಟಡಗಳಿಂದಾಗಿ ಮೂಲ ಹೆಸರನ್ನು ಕಳೆದುಕೊಳ್ಳುವ ಆತಂಕ ಎದುರಾಗಿದೆ. ವೃತ್ತದ ಸುತ್ತಲಿನ ವಿದ್ಯುತ್ ಕಂಬಗಳನ್ನು ತೆರವುಗೊಳಿಸಿ, ಮಹಾತ್ಮ ಗಾಂಧೀಜಿ ಪುತ್ಥಳಿ ನಿರ್ಮಿಸಬೇಕು ಎಂದು ಒತ್ತಾಯಿಸಿದರು.
ಶಂಭಾಜಿ ಕಾಶೀದ, ರಾಘವೇಂದ್ರ ಗುಜಮಾಗಡಿ, ಈರಣ್ಣ ಕೋರಿ, ಬಸವರಾಜ ತಾವರೆ, ಮಂಜುನಾಥ ದೊಡ್ಡಮನಿ, ಧರಣೇಂದ್ರ ರೋಖಡೆ, ಬಸವರಾಜ ಸಾಲಿಮಠ, ಸಂತೋಷ ಗೋವೇಶ್ವರ, ರಾಜು ಅಂಗಡಿ ಉಪಸ್ಥಿತರಿದ್ದರು.