ಒತ್ತುವರಿ ಮಂಜೂರಾತಿಗೆ ಮನವಿ

12sri-1 (1)
Published on

ಶೃಂಗೇರಿ: ಒತ್ತುವರಿ ಮಂಜೂರಾತಿ ಹಾಗೂ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಮಲೆನಾಡು ನಾಗರಿಕ ಹಕ್ಕುಗಳ ಹೋರಾಟ ಸಮಿತಿ ಸದಸ್ಯರು ತಾಲೂಕು ಕಚೇರಿಯಲ್ಲಿ ತಹಸೀಲ್ದಾರ್ ಅನುಪ್ ಸಂಜೋಗ್‌ಗೆ ಮನವಿ ಸಲ್ಲಿಸಿದರು.

ಹೋರಾಟ ಸಮಿತಿ ಅಧ್ಯಕ್ಷ ಅಂಬ್ಲೂರು ರಾಮಕೃಷ್ಣ ಮಾತನಾಡಿ, ಶೃಂಗೇರಿ ಕ್ಷೇತ್ರದಾದ್ಯಂತ ಡೀಮ್ಡ್-3 ಸರ್ವೇ ಕಾರ್ಯ ನಡೆಯಲಿದ್ದು ಇದರಿಂದ ಜನಸಾಮಾನ್ಯರಲ್ಲಿ ಆತಂಕ ನೆಲೆಸಿದೆ. ಡೀಮ್ಡ್-3ನಲ್ಲಿ ಸರ್ಕಾರಿ ಜಾಗ, ವಾಸದ ಮನೆ, ಒತ್ತುವರಿ ಜಾಗಗಳು, ಆಶ್ರಯ ನಿವೇಶನಗಳು ಹಾಗೂ ವಾಸದ ಮನೆಗಳ ಹಂಚಿಕೆಗೆ ಅಗತ್ಯವಿರುವ ಜಾಗಗಳು,ಸಾರ್ವಜನಿಕ ರಸ್ತೆಗಳು,ದೇವಸ್ಥಾನಗಳು ಇವುಗಳನ್ನು ಕಡ್ಡಾಯವಾಗಿ ನಮೂದಿಸಬೇಕು.ಅರಣ್ಯ ಇಲಾಖೆಯ ಅಭಿಪ್ರಾಯಗಳು ಅವೈಜ್ಞಾನಿಕವಾಗಿ ನೀಡುತ್ತಿದ್ದು ಅದನ್ನು ಕೂಡಲೇ ಸರಿಪಡಿಸಬೇಕು ಎಂದರು.

ಸರ್ವೇ ಕಾರ್ಯದಲ್ಲಿ 2025ನೇ ಸಾಲಿನವರೆಗೆ ಸಾರ್ವಜನಿಕರು ವಾಸವಿರುವ ಮನೆಗಳನ್ನು ನಕ್ಷೆಯಲ್ಲಿ ಗುರುತಿಸಬೇಕು.ಸರ್ವೇ ಹೆಸರಿನಲ್ಲಿ ಮಲೆನಾಡಿಗರ ಬದುಕು ಕಸಿದುಕೊಳ್ಳುವ ಕೆಲಸವಾಗುತ್ತಿದೆ.ಅರಣ್ಯ ಹಾಗೂ ಕಂದಾಯ ಇಲಾಖೆಯಿಂದ ಜಂಟಿ ಕಾರ್ಯ ನಡೆಸಲಾಗುತ್ತಿದ್ದು ಅದರಿಂದ ಜನಸಾಮಾನ್ಯರಿಗೆ ಅನ್ಯಾಯವಾಗಬಾರದು ಎಂದು ಆಗ್ರಹಿಸಿದರು.

ಗೌರವಾಧ್ಯಕ್ಷ ಕಚ್ಚೋಡಿ ಶ್ರೀನಿವಾಸ್, ಉಪಾಧ್ಯಕ್ಷ ನಾಗೇಶ್‌ನಾಯ್ಕ, ಸದಸ್ಯರಾದ ಚಂದ್ರಶೇಖರ್ ಗೊಳ್ಗೋಡು, ನಾಗೇಂದ್ರ ಬೆಳಂದೂರು, ನಾಗೇಶ್ ಗೊಳ್ಗೋಡು, ಮಂಜುನಾಥ್‌ನಾಯ್ಕ, ವೆಂಕಟೇಶ್ ಕೋಟೆ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net