

ಉಡುಪಿ: ಬಾಂಗ್ಲಾದೇಶದಲ್ಲಿ ಕೆಲವು ದಿನಗಳಿಂದ ಹಿಂದೂ ಶ್ರದ್ಧಾ ಕೇಂದ್ರಗಳ ದ್ವಂಸ, ಹಿಂದೂಗಳ ಮೇಲೆ ನಡೆಯುತ್ತಿರುವ ಹಿಂಸಾಚಾರ ತಡೆಗಟ್ಟಲು ಕೇಂದ್ರ ಸರ್ಕಾರ ತಕ್ಷಣ ಮಧ್ಯ ಪ್ರವೇಶ ಮಾಡಬೇಕು. ಅಸಹಾಯಕ ಬಾಂಗ್ಲಾ ದೇಶದ ಹಿಂದೂಗಳನ್ನು ಆದಷ್ಟ್ಟು ಶೀಘ್ರವಾಗಿ ಭಾರತದಲ್ಲಿ ಪುನರ್ವಸತಿ ಕಲ್ಪಿಸಬೇಕು ಎಂದು ಸನಾತನ ಹಿಂದೂ ಧರ್ಮರಕ್ಷಣಾ ವೇದಿಕೆ ಅಧ್ಯಕ್ಷ ಮೋಹನ್ ಭಟ್ ಆಗ್ರಹಿಸಿದರು.
ಸನಾತನ ಹಿಂದೂ ಧರ್ಮರಕ್ಷಣಾ ವೇದಿಕೆ ವತಿಯಿಂದ ಬಾಂಗ್ಲಾ ದೇಶದ ವಿಷಯದಲ್ಲಿ ಸೂಕ್ತಕ್ರಮಕ್ಕೆ ಆಗ್ರಹಿಸಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಉಡುಪಿ ಜಿಲ್ಲಾಧಿಕಾರಿ ಮೂಲಕ ಮನವಿ ಸಲ್ಲಿಸಿ ಅವರು ಮಾತನಾಡಿದರು.
ಅಲ್ಪ ಸಂಖ್ಯಾತ ಬಾಂಗ್ಲಾ ಹಿಂದುಗಳಿಗೆ ದೇಶದ ಪೌರತ್ವ ನೀಡಬೇಕು. ಭಾರತ ದೇಶಕ್ಕೆ ನಿರಂತರ ಅಕ್ರಮವಾಗಿ ನುಸುಳುತ್ತಿರುವ ರೋಹಿಂಗ್ಯ ಮುಸ್ಲಿಮರು ಭಾರತಕ್ಕೆ ಬಹಳ ಅಪಾಯಕಾರಿಯಾಗಿದ್ದು, ಅವರನ್ನು ವಾಪಾಸು ಬಾಂಗ್ಲಾ ದೇಶಕ್ಕೆ ಕಳುಹಿಸಬೇಕು. ಮತಾಂಧರ ಅಟ್ಟಹಾಸಕ್ಕೆ ಹಿಂದೂ ಮಹಿಳೆಯರು ಬಲಿಯಾಗದಂತೆ ತಡೆಯುವುದು ಕೇಂದ್ರ ಸರ್ಕಾರದ ಜವಾಬ್ದಾರಿ ಎಂದರು.
ಜಿತೇಶ್ ಉಡುಪಿ, ಶ್ರೀಧರ್ ಬಿಜೂರು ಬೈಂದೂರು, ಸಂದೀಪ್ ಮೂಡಬೆಟ್ಟು, ಚಿತ್ತನ್ ಮೂಳೂರು ಕಾಪು, ರವೀಂದ್ರ ಕಾಮತ್, ದಿನೇಶ್ ಪೂಜಾರಿ, ರಾಜ್ ಗೋಪಾಲ ಉಪ್ಪುಂದ, ನವೀನ್ ಕಾಂಚನ್ ಕುಂದಾಪುರ ಮೊದಲಾದವರು ಉಪಸ್ಥಿತರಿದ್ದರು.