ವಿದ್ಯಾರ್ಥಿ ವೇತನ ಬಿಡುಗಡೆಗೆ ಮನವಿ

CLK MANAVI 17
Published on

ಚಳ್ಳಕೆರೆ: ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಕಳೆದ ಮೂರು ವರ್ಷಗಳಿಂದ ಸಮರ್ಪಕವಾಗಿ ವಿದ್ಯಾರ್ಥಿ ವೇತನ ಬಿಡುಗಡೆ ಮಾಡುತ್ತಿಲ್ಲ ಎಂದು ಆರೋಪಿಸಿ ಗುರುವಾರ ತಹಸೀಲ್ದಾರ್ ರೇಹಾನ್ ಪಾಷಾ ಅವರಿಗೆ ವಿದ್ಯಾರ್ಥಿಗಳ ಪಾಲಕರು ಮನವಿ ಸಲ್ಲಿಸಿದರು.

ಪ್ರತಿಷ್ಠಿತ ಶಾಲೆಗಳಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ. ಆದರೆ, ದಾಖಲಾದ ಶಾಲೆಗೆ ಸರ್ಕಾರದಿಂದ ಬಿಡುಗಡೆ ಆಗಿರುವ ಹಣ ನೀಡಿಲ್ಲ.

ಪರಿಣಾಮ ಹಣ ಕಟ್ಟುವಂತೆ ಶಾಲೆಗಳಿಂದ ಒತ್ತಡ ಮಾಡಲಾಗುತ್ತಿದೆ. 6ರಿಂದ 10ನೇ ತರಗತಿಯವರೆಗೆ ತಡೆ ಹಿಡಿದಿರುವ 3 ವರ್ಷದ ವಿದ್ಯಾರ್ಥಿ ವೇತನವನ್ನು ಬಿಡುಗಡೆ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಯಾದಲಗಟ್ಟೆ ಜಗನ್ನಾಥ, ಮುತ್ತಿಗೇರಹಳ್ಳಿ ನಾಗೇಶ್, ರಾಜಣ್ಣ, ಮೈರಾಡ ಪಾಲಯ್ಯ, ಗೌರೀಶ, ನಾಗರಾಜ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net