ಕುಂದುಕೊರತೆ ನೀಗಿಸಲು ಮನವಿ

h3-alemaari
Published on

ಹುಬ್ಬಳ್ಳಿ: ವಿವಿಧ ಕುಂದುಕೊರತೆ ನೀಗಿಸುವಂತೆ ಒತ್ತಾಯಿಸಿ ಕರ್ನಾಟಕ ಅಲೆಮಾರಿ ಬುಡಕಟ್ಟು ಮಹಾಸಭಾ ಧಾರವಾಡ ಜಿಲ್ಲಾ ಘಟಕ ವತಿಯಿಂದ ಬುಧವಾರ ಧಾರವಾಡದಲ್ಲಿ ಜಿಲ್ಲಾಧಿಕಾರಿ ದಿವ್ಯಪ್ರಭು ಅವರಿಗೆ ಮನವಿ ಸಲ್ಲಿಸಲಾಯಿತು.
ಅಲೆಮಾರಿಗಳಿಗೆ ಸ್ವಂತ ಮನೆ ನಿರ್ಮಿಸಿಕೊಡಬೇಕು. ಸ್ವಂತ ಉದ್ಯೋಗ ಆರಂಭಿಸಲು ನೆರವು ಕೊಡಬೇಕು. ಹಿರಿಯ ಕಲಾವಿದರಿಗೆ ಸಹಾಯ ಹಸ್ತ ಚಾಚಬೇಕು ಸೇರಿ ವಿವಿಧ ಬೇಡಿಕೆಗಳ ಮನವಿ ಕೊಡಲಾಯಿತು.
ಸಂಘದ ಅಧ್ಯಕ್ಷ ರಾಜಶೇಖರ ಡೊಕ್ಕಣ್ಣನವರ, ಕಾರ್ಯದರ್ಶಿ ಅಣ್ಣಪ್ಪ ಚವ್ಹಾಣ, ಪ್ರಮುಖರಾದ ಹನುಮಂತಪ್ಪ ಟಿಕೋಳ, ಮುರಳಿ ದತ್ತವಾಡ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net