ರಾಷ್ಟ್ರೀಯ ಹೆದ್ದಾರಿ ದುರಸ್ತಿಗೆ ಮನವಿ

NRD Manavi
Published on

ನರಗುಂದ: ತಾಲೂಕಿನ ಕೊಣ್ಣೂರ ಬಳಿ ಹದಗೆಟ್ಟಿರುವ ರಾಷ್ಟ್ರೀಯ ಹೆದ್ದಾರಿಯನ್ನು ದುರಸ್ತಿಪಡಿಸುವಂತೆ ಗ್ರಾಮಸ್ಥರು ಕೊಣ್ಣೂರ ಪಿಡಿಒ ಮಂಜುನಾಥ ಗಣಿ ಅವರಿಗೆ ಇತ್ತೀಚೆಗೆ ಮನವಿ ಸಲ್ಲಿಸಿದರು.

ರಾಷ್ಟ್ರೀಯ ಹೆದ್ದಾರಿ 218 ವ್ಯಾಪ್ತಿಯ ಕೊಣ್ಣೂರ ಬಳಿ ತುಂಬಾ ಕೆಟ್ಟುಹೋಗಿದೆ. ವಾಹನಗಳ ಸಂಚಾರ ದಟ್ಟಣೆಯಿಂದ ರಸ್ತೆ ಪಕ್ಕದ ಅಂಗಡಿ, ಹೋಟೆಲ್‌ಗಳಿಗೆ ಧೂಳು ಆವರಿಸುತ್ತದೆ. ಅಲ್ಲದೆ, ರಸ್ತೆ ಪಕ್ಕದಲ್ಲಿ ತರಕಾರಿ ಮತ್ತು ಹಣ್ಣು ಹಂಪಲ ಮಾರಾಟಗಾರರಿಗೆ ತೊಂದರೆಯಾಗುತ್ತಿದೆ. ಕೂಡಲೇ ರಸ್ತೆ ದುರಸ್ತಿಪಡಿಸಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಗ್ರಾಮಸ್ಥರಾದ ಶಂಕರ ವಾಲಿ, ಅಪ್ಪನಗೌಡ ಪಾಟೀಲ, ಆನಂದ ನರಗುಂದ, ಸಂತೋಷ ಹುರಕಡ್ಲಿ, ಕಿರಣ ಅಂಗಡಿ, ಕೃಷ್ಣಗೌಡ್ರ ಮುಳಗುಂದ, ನಾಗರಾಜ ಮಡಿವಾಳರ, ಸದಾಂ ಮುತ್ತಣ್ಣವರ, ಶಂಕರಸಾ ಪವಾರ, ಸಂತೋಷ ಕರಿಕಟ್ಟಿ, ರಾಮನಗೌಡ ಸಾಳಿಗೌಡ್ರ, ಕಾರ್ತಿಕ ಕಲ್ಮನಿ, ಮಲ್ಲಯ್ಯ ಪುರುತದೇವರಮಠ, ಹನುಮಂತ ಪೂಜಾರ, ದ್ಯಾಮಣ್ಣ ದ್ಯಾವನ್ನವರ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net