ಮುಕ್ತಿಧಾಮ ಅಭಿವೃದ್ಧಿ ಅನುದಾನಕ್ಕೆ ಮನವಿ

08 NRL-2
Published on

ನರೇಗಲ್ಲ: ಪಟ್ಟಣದ ಗಜೇಂದ್ರಗಡ ರಸ್ತೆಯಲ್ಲಿರುವ ಯಜ್ಞೋಪವೀತ ಸಮಾಜದ ಮುಕ್ತಿಧಾಮದ ದುರಸ್ತಿಗೆ ಅನುದಾನ ಬಿಡುಗಡೆ ಮಾಡುವಂತೆ ಶಾಸಕ ಜಿ.ಎಸ್. ಪಾಟೀಲ ಅವರಿಗೆ ಸಮಾಜದ ಮುಖಂಡರು ಭಾನುವಾರ ಮನವಿ ಸಲ್ಲಿಸಿದರು.
ಈ ವೇಳೆ ಮುಕ್ತಿಧಾಮದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಗುರುರಾಜ ಕುಲಕರ್ಣಿ ಮಾತನಾಡಿ, ಸಮಾಜದ ಸ್ಮಶಾನವನ್ನು ಹಿಂದೆ ಧರ್ಮಸ್ಥಳದ ಟ್ರಸ್ಟ್‌ನ ಸಹಾಯದಿಂದ ಅಭಿವೃದ್ಧಿ ಪಡಿಸಿದ್ದೇವೆ. ಆ ಸಮಯದಲ್ಲಿ ಬಾಗಲಕೋಟೆ ಸಂಸದರಾಗಿದ್ದ ಆರ್.ಎಸ್. ಪಾಟೀಲ ಅವರೂ ಅನುದಾನ ನೀಡಿದ್ದರು. ಈಗ ಸ್ಮಶಾನ ಶಿಥಿಲಾವಸ್ಥೆಗೆ ತಲುಪಿ, ರಕ್ಷಣಾ ಗೋಡೆ ಹಾಳಾಗಿದೆ. ಸ್ಮಶಾನಕ್ಕೆ ಹೋಗುವ ಮೆಟ್ಟಿಲುಗಳೂ ಮಣ್ಣಿನಡಿ ಹೂತು ಹೋಗಿವೆ. ಅಂತ್ಯಸಂಸ್ಕಾರಕ್ಕೆ ಹೋಗಲು ಬಹಳಷ್ಟು ತೊಂದರೆ ಆಗುತ್ತಿದೆ. ಆದಷ್ಟು ಬೇಗ ದುರಸ್ತಿ ಕೈಗೊಳ್ಳುವ ಅವಶ್ಯಕತೆ ಇದೆ. ಹೀಗಾಗಿ ಶಾಸಕ ನಿಧಿಯಿಂದ 5 ಲಕ್ಷ ಬಿಡುಗಡೆ ಮಾಡಿಸಿ, ಸ್ಮಶಾನ ದುರಸ್ತಿಗೆ ಅನುಕೂಲ ಮಾಡಿಕೊಡಬೇಕು ಎಂದರು.
ಶಾಸಕ ಜಿ.ಎಸ್ ಪಾಟೀಲ ಮಾತನಾಡಿ, ಶೀಘ್ರವಾಗಿ ಅನುದಾನ ಮಂಜೂರು ಮಾಡುವ ಭರವಸೆ ಕೊಟ್ಟರು. ಮುಕ್ತಿಧಾಮ ಜೀರ್ಣೋದ್ಧಾರ ಸಮಿತಿ ಖಜಾಂಚಿ ವಿನಾಯಕ ಗ್ರಾಮಪುರೋಹಿತ, ದತ್ತಭಕ್ತ ಮಂಡಳಿ ಅಧ್ಯಕ್ಷ ಡಾ.ಎನ್.ಎಲ್ ಗ್ರಾಮಪುರೋಹಿತ, ಕಾರ್ಯದರ್ಶಿ ರಘುನಾಥ ಕೊಂಡಿ, ಶೇಷಗಿರಿರಾವ ಕುಲಕರ್ಣಿ, ಎ.ಜಿ. ಕುಲಕರ್ಣಿ, ಎಸ್.ಎಚ್. ಕುಲಕರ್ಣಿ, ಅರುಣ ಕುಲಕರ್ಣಿ, ಆನಂದ ಕುಲಕರ್ಣಿ, ನಾಗೇಶಭಟ್ಟ ಗ್ರಾಮಪುರೋಹಿತ, ಪ್ರಶಾಂತ ಗ್ರಾಮಪುರೋಹಿತ, ಹರೀಶ ಕುಲಕರ್ಣಿ, ಆದರ್ಶ ಕುಲಕರ್ಣಿ, ಪ್ರಕಾಶ ಕಾಳೆ, ನಾರಾಯಣಪ್ಪ ವಡ್ಡಟ್ಟಿ, ಮುತ್ತಣ್ಣ ಹೂಲಗೇರಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net