ಸೇವಾನಿರತ ಶಿಕ್ಷಕರಿಗೆ ಟಿಇಟಿ ಕಡ್ಡಾಯ ಪುನರ್ ಪರಿಶೀಲನೆಗೆ ಮನವಿ

20 Dwd 5
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಸೇವಾನಿರತ ಶಿಕ್ಷಕರಿಗೆ `ಶಿಕ್ಷಕರ ಅರ್ಹತಾ ಪರೀಕ್ಷೆ' (ಟಿಇಟಿ)ಯನ್ನು ಕಡ್ಡಾಯಗೊಳಿಸಿರುವ ಕುರಿತು ಸುಪ್ರೀಂ ಕೋರ್ಟ್ ತೀರ್ಪನ್ನು ಪುನರ್ ಪರಿಶೀಲನೆ ಮಾಡಲು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮಧ್ಯಪ್ರವೇಶ ಮಾಡಬೇಕು ಎಂದು ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಿ0ದ ಆಗ್ರಹಿಸಲಾಯಿತು.

ನಗರದ ಜಿಲ್ಲಾಽಕಾರಿ ಕಚೇರಿ ಎದುರು ಜಮಾಯಿಸಿದ ಫೆಡರೇಷನ್ ಪದಾಧಿಕಾರಿಗಳು ಶಿರಸ್ತೇದಾರ ಮೂಲಕ ಪ್ರಧಾನಮಂತ್ರಿಗೆ ಮನವಿ ರವಾನಿಸಿದರು.

ಆದೇಶಗಳು ಪೂರ್ವಾನ್ವಯವಾಗುವುದರಿಂದ ಸೇವೆಯಲ್ಲಿರುವ ಶಿಕ್ಷಕರಿಗೆ ತೊಂದರೆಯಾಗುತ್ತದೆ. ಎನ್‌ಸಿಟಿಇ ಹೊರಡಿಸಿದ ಆದೇಶ ಸಹಜ ನ್ಯಾಯ ತತ್ವಕ್ಕೆ ವಿರೋಧವಾಗಿದೆ. ಸೇವಾನುಭವ ಇರುವ ಶಿಕ್ಷಕರನ್ನು ಸೇವೆಯಿಂದ ವಜಾಗೊಳಿಸುವುದು ಶಿಕ್ಷಕರಲ್ಲಿ ತಲ್ಲಣ ಉಂಟು ಮಾಡಿದೆ. ರಾಜ್ಯದ ಎಲ್ಲ ಶಿಕ್ಷಕರು ತರಬೇತಿ ಪಡೆದು ಶಿಕ್ಷಕರಾಗಿ ನೇಮಕವಾಗಿದ್ದಾರೆ. ಕೇಂದ್ರ ಸರ್ಕಾರ ಮಧ್ಯಪ್ರವೇಶ ಮಾಡಿ ದೇಶಾದ್ಯಂತ ಶಿಕ್ಷಕರಿಗೆ ನ್ಯಾಯ ಒದಗಿಸಬೇಕು ಎಂದು ಮನವಿಯಲ್ಲಿ ವಿನಂತಿಸಿದ್ದಾರೆ.

ಅಖಿಲ ಭಾರತ ಶಿಕ್ಷಕರ ಫೆಡರೇಷನ್ ರಾಷ್ಟ್ರೀಯ ಅಧ್ಯಕ್ಷ ಬಸವರಾಜ ಗುರಿಕಾರ, ಜಿಲ್ಲಾಧ್ಯಕ್ಷ ವಿ.ಎಫ್. ಚುಳಕಿ, ಪ್ರಧಾನ ಕಾರ್ಯದರ್ಶಿ ರಾಜಶೇಖರ ಹೊನ್ನಪನವರ, ಆರ್.ಬಿ. ಲಿಂಗದಾಳ, ಶಾಂತಾ ಶೀಲವಂತ, ಎ.ಆರ್. ದೇಸಾಯಿ, ಜಿ.ಎಸ್. ಹುಬ್ಬಳ್ಳಿ, ಜೆ.ಕೆ. ಉಳ್ಳೆಟ್ಟಿ,  ಉಮೇಶ ಕುರಬರ, ಎ.ಎನ್. ಶೇಖ್, ಮಾರುತಿ ನಾಗಾವಿ, ಶೋಭಾ ಬೆಂಗೇರಿ, ಎನ್.ಆರ್. ಪಟೇಲ, ಎಸ್.ವಿ. ಸಲಗರ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net