ನಾಮಫಲಕಗಳ ಕನ್ನಡೀಕರಣಕ್ಕೆ ಮನವಿ

30 Dwd 7
Published on

ಧಾರವಾಡ: ವ್ಯಾಪಾರ, ವಾಣಿಜ್ಯ ಮಳಿಗೆಗಳಲ್ಲಿ ಕನ್ನಡ ನಾಮಫಲಕಗಳು ಇರಬೇಕು ಎಂದು ಸರ್ಕಾರ ಆದೇಶಿಸಿದೆ. ಅದರ ಅನ್ವಯ ಅವಳಿನಗರದ ಪಾಲಿಕೆ ವ್ಯಾಪ್ತಿಯ ಎಲ್ಲ ಮಳಿಗೆಗಳ ಫಲಕಗಳನ್ನು ಕನ್ನಡೀಕರಣಗೊಳಿಸಬೇಕು ಎಂದು ಕರುನಾಡ ರಕ್ಷಣಾ ವೇದಿಕೆ ಆಗ್ರಹಿಸಿದೆ.
ಈ ಕುರಿತು ಶನಿವಾರ ಪಾಲಿಕೆಯ ಸಹಾಯಕ ಆಯುಕ್ತರಿಗೆ ಮನವಿ ಸಲ್ಲಿಸಿದ ಕಾರ್ಯಕರ್ತರು, ಇತ್ತೀಚೆಗೆ ಬೆಂಗಳೂರಿನಲ್ಲಿ ಶುದ್ಧ ಕನ್ನಡ ನಾಮಫಲಕ ಅಭಿಯಾನ ನಡೆಸಲಾಗಿದೆ. ಇದಕ್ಕೆ ಪೂರಕವಾಗಿ ಕರ್ನಾಟಕ ರಕ್ಷಣಾ ವೇದಿಕೆ ಬೃಹತ್ ಅಭಿಯಾನ ಹಮ್ಮಿಕೊಂಡಿದೆ. ಅನ್ಯ ಭಾಷೆಗಳ ನಾಮಫಲಕಗಳನ್ನು ಕನ್ನಡೀಕರಣಗೊಳಿಸುವ ಪ್ರಕ್ರಿಯೆ ಚುರುಕುಗೊಂಡಿದೆ. ಈ ಅಭಿಯಾನಕ್ಕೆ ಕರುನಾಡ ರಕ್ಷಣಾ ವೇದಿಕೆ ಕೈಜೋಡಿಸಿದೆ. ಅಭಿಯಾನಕ್ಕೆ ಪಾಲಿಕೆಯಿಂದ ಸೂಕ್ತ ಸ್ಪಂದನೆ ದೊರೆಯದಿದ್ದರೆ ಹೋರಾಟ ಅನಿವಾರ್ಯ ಎಂದು ಮನವಿಯಲ್ಲಿ ಎಚ್ಚರಿಕೆ ನೀಡಿದ್ದಾರೆ.
ಕರುನಾಡ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ವಿನಾಯಕ ಗುಡ್ಡದಕೇರಿ, ಮಹಿಳಾ ಜಿಲ್ಲಾಧ್ಯಕ್ಷೆ ಶುಭಾ ಶೀರಿ, ಬಸವರಾಜ ಭಜಂತ್ರಿ, ಹನುಮಂತ ಕಮಕೇರಿ, ನಿಯಾಜ್ ನಿಪ್ಪಾಣಿ, ಹೇಮಂತ ಸಗಬಾಲ, ಗಣೇಶ ತೇರದಾಳ, ಅನಿತಾ ಹೊಸಕೋಟೆ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net