ಕಟ್ಟಡ ಕಾರ್ಮಿಕರಿಗೆ ನ್ಯಾಯ ದೊರಕಿಸುವಂತೆ ಮನವಿ

New Project (16)
Published on

ಕಡಬ: ಮರಳು ಮತ್ತು ಕೆಂಪು ಕಲ್ಲು ಅಭಾವದಿಂದ ಕಟ್ಟಡ ಕಾರ್ಮಿಕರಿಗೆ ಆಗುತ್ತಿರುವ ತೊಂದರೆ ನಿವಾರಿಸಿ ಕಾರ್ಮಿಕರಿಗೆ ನ್ಯಾಯ ದೊರಕಿಸಿಕೊಡುವಂತೆ ಆಗ್ರಹಿಸಿ ಬಿಎಂಎಸ್ ಕಡಬ ತಾಲೂಕು ಸಮಿತಿ ವತಿಯಿಂದ ಕಡಬ ತಹಸೀಲ್ದಾರ್ ಪ್ರಭಾಕರ ಖಜೂರೆ ಮುಖಾಂತರ ಸರ್ಕಾರ ಮತ್ತು ಕಡಬ ಪೊಲೀಸರ ಮುಖಾಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಮನವಿ ನೀಡಲಾಯಿತು.

ಕೆಂಪು ಕಲ್ಲು, ಮರಳು ಪೂರೈಕೆ ವ್ಯತ್ಯಯದಿಂದ ಕಾರ್ಮಿಕರು ಉದ್ಯೋಗವಿಲ್ಲದೆ ಪರದಾಡುವಂತಾಗಿದೆ. ತಕ್ಷಣ ಸಂಬಂಧಪಟ್ಟವರು ಸಮಸ್ಯೆ ಬಗೆಹರಿಸಬೇಕು. ಒಂದು ವಾರದೊಳಗೆ ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆಯನ್ನು ಮನವಿಯಲ್ಲಿ ಉಲ್ಲೇಖಿಸಲಾಗಿದೆ.

ಬಿಎಂಎಸ್ ಜಿಲ್ಲಾಧ್ಯಕ್ಷ ಅನಿಲ್‌ಕುಮಾರ್, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಕುಮಾರನಾಥ ಶೆಟ್ಟಿ, ಕಡಬ ತಾಲೂಕು ಸಮಿತಿ ಅಧ್ಯಕ್ಷ ಚಂದ್ರಶೇಖರ ಮರ್ಧಾಳ, ಸುಬ್ರಹ್ಮಣ್ಯ ವಲಯ ಅಧ್ಯಕ್ಷ ಗಿರೀಶ್ ಆಚಾರ್, ವಿಹಿಂಪ ಪುತ್ತೂರು ಜಿಲ್ಲಾ ಸಹ ಕಾರ್ಯದರ್ಶಿ ಪ್ರಮೋದ್ ರೈ ಕಡಬ, ಬಜರಂಗದಳ ಕಡಬ ತಾಲೂಕು ಸಂಯೋಜಕ ಅಶ್ವಿತ್ ಕಂಡಿಗ, ಸುಬ್ರಹ್ಮಣ್ಯ ಸಿಎ ಬ್ಯಾಂಕ್ ನಿರ್ದೇಶಕ ಯಶೋದಾಕೃಷ್ಣ, ಬಿಎಂಎಸ್ ಸದಸ್ಯರಾದ ಬಾಲಕೃಷ್ಣ ಬಲ್ಯ ಕೆರೆನಡ್ಕ, ಶಿವರಾಮ ಗೌಡ ಅಚ್ಚಿಲ, ಮೋಹನ ಗೌಡ ಅಚ್ಚಿಲ, ವರದಾರಾಜ್ ಕೆರ್ಮಾಯಿ ಮೊದಲಾದವರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net