ಹತ್ತು ಕೋಟಿ ರೂ ಅನುದಾನಕ್ಕೆ ಮನವಿ: ಪ್ರಗತಿಪರ ಸಂಘಟನೆಗಳ ಮಹಾಒಕ್ಕೂಟದಿಂದ ಒತ್ತಾಯ

Appeal for grant of ten crores Mandya
Published on

ಮಂಡ್ಯ: ಸಾತನೂರು ಬಡಾವಣೆಯಲ್ಲಿ ಭಗವಾನ್ ಗೌತಮ ಬುದ್ಧರ ಧಮ್ಮ ಧ್ಯಾನ ಕಟ್ಟಡ ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ. ಈ ಹಿನ್ನೆಲೆಯಲ್ಲಿ ಸರ್ಕಾರದಿಂದ 10 ಕೋಟಿ ರೂ ಅನುದಾನ ನೀಡಬೇಕು ಎಂದು ಜಿಲ್ಲಾ ಪ್ರಗತಿಪರ ಸಂಘಟನೆಗಳ ಮಹಾ ಒಕ್ಕೂಟದ ಕಾರ್ಯಕರ್ತರು ಜಿಲ್ಲಾಧಿಕಾರಿ ಡಾ.ಕುಮಾರ ಅವರಿಗೆ ಮನವಿ ಸಲ್ಲಿಸಿದರು.

ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿ ವರ್ಗದ ನಾಲ್ಕು ಲಕ್ಷ ಜನಕ್ಕಿಂತಲೂ ಹೆಚ್ಚು ವಾಸ ಮಾಡುತ್ತಿದ್ದಾರೆ. ಇವರು ಆರ್ಥಿಕವಾಗಿ ಹಿಂದುಳಿದವರಾಗಿದ್ದಾರೆ. ಮೂಲ ಸೌಲಭ್ಯವು ಇವರಿಗೆ ಇಲ್ಲದಾಗಿದೆ. ಈ ಸಂಬಂಧ ಬುದ್ಧ ಭಾರತ ೌಂಡೇಷನ್ ಅವರು ಭಗವಾನ್ ಗೌತಮ ಬುದ್ಧರ ಧಮ್ಮ ಧ್ಯಾನ ಕಟ್ಟಡ ಸೇರಿದಂತೆ ವೃತ್ತಿ ಆಧಾರಿತ ತರಬೇತಿ ಕೇಂದ್ರ ನಿರ್ಮಿಸುತ್ತಿರುವ ಹಿನ್ನಲೆಯಲ್ಲಿ ಅನುದಾನ ನೀಡಬೇಕು ಎಂದು ಒತ್ತಾಯಿಸಿದರು.

ಈ ಕಟ್ಟಡ ನಿರ್ಮಾಣ ಮಾಡುತ್ತಿರುವ ಉದ್ದೇಶವೇನೆಂದರೆ ಕೂಸಿನ ಮನೆ, ದಾರ್ಶನಿಕರ ಸಮುದಾಯ ಭವನ ನಿರ್ಮಾಣ ಮಾಡಿ ಆರ್ಥಿಕ, ಶೈಕ್ಷಣಿಕ ಹಾಗೂ ಧಾರ್ಮಿಕವಾಗಿ ಇತರೆ ಕ್ಷೇತ್ರಗಳಲ್ಲಿ ಅನುಕೂಲ ಮಾಡಿಕೊಡಲು ತೀರ್ಮಾನಿಸಲಾಗಿದೆ. ಕಟ್ಟಡ ಕಟ್ಟಿಸಿಕೊಡುವುದರಿಂದ ಪರಿಶಿಷ್ಟ ಜಾತಿ, ಶೋಷಿತರು, ಹಿಂದುಳಿದವರು ಧಾರ್ಮಿಕ ಅಲ್ಪಸಂಖ್ಯಾತರರು ಇನ್ನೂ ಅಲ್ಪಸಂಖ್ಯಾತ ಜನರಿಗೆ ಅನುಕೂಲ ಮಾಡಿಕೊಟ್ಟಂತಾಗುತ್ತದೆ ಎಂದರು.

ಒಕ್ಕೂಟದ ಹನಕೆರೆ ಗಂಗರಾಜು, ಜೆ.ರಾಮಯ್ಯ, ಸಿದ್ದರಾಜು, ಗಣೇಶ್, ಬಿ.ಹನುಮೇಶ್, ಗುರಪ್ಪ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net