ವಿವಿಧ ರಸ್ತೆಗಳ ಅಭಿವೃದ್ಧಿಗೆ ಜಿ.ಪಂ ಅನುದಾನ ಕೋರಿ ಮನವಿ

BALACHANDRA
Published on

ಮಡಿಕೇರಿ: ಕರಿಕೆ ಗ್ರಾ.ಪಂ ವ್ಯಾಪ್ತಿಯ ವಿವಿಧ ರಸ್ತೆಗಳ ಅಭಿವೃದ್ಧಿಗೆ ಕೊಡಗು ಜಿಲ್ಲಾ ಪಂಚಾಯಿತಿಯಿಂದ ಹೆಚ್ಚಿನ ಅನುದಾನ ಮಂಜೂರು ಮಾಡಿ ಶೀಘ್ರ ಕಾಮಗಾರಿ ಆರಂಭಿಸಬೇಕೆಂದು ಗ್ರಾ.ಪಂ ಉಪಾಧ್ಯಕ್ಷ ಎನ್.ಬಾಲಚಂದ್ರ ನಾಯರ್ ಒತ್ತಾಯಿಸಿದ್ದಾರೆ.


ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಮನವಿ ಸಲ್ಲಿಸಿದ ಅವರು, ಕರಿಕೆ ಗ್ರಾಮದಲ್ಲಿ ಶೇ.೭೦ ರಷ್ಟು ಮಂದಿ ಹಿಂದುಳಿದ ವರ್ಗಕ್ಕೆ ಸೇರಿದವರು ವಾಸವಾಗಿದ್ದಾರೆ. ಇಲ್ಲಿನ ವಿವಿಧ ರಸ್ತೆಗಳು ಸಂಪೂರ್ಣವಾಗಿ ಹದಗೆಟ್ಟಿದ್ದು, ವಾಹನಗಳ ಸಂಚಾರಕ್ಕೆ ಯೋಗ್ಯವಾಗಿಲ್ಲ. ಆದ್ದರಿಂದ ಜಿ.ಪಂ ಮೂಲಕ ಹೆಚ್ಚಿನ ಅನುದಾನ ನೀಡಬೇಕೆಂದು ಗಮನ ಸೆಳೆದರು.


ಆನೆಪಾರೆ ಎಸ್.ಸಿ.ಕಾಲನಿ ರಸ್ತೆ, ಬೀಟಿಯಾಡಿ ಎಸ್.ಸಿ.ಕಾಲನಿ ರಸ್ತೆ, ತೋಟಂ ಆನೆಪಾರೆ ರಸ್ತೆ, ಚೆಂಬೇರಿ ಆನೆಪಾರೆ ರಸ್ತೆ ಇನ್ನಿತರ ರಸ್ತೆಗಳ ಅಭಿವೃದ್ಧಿಗೆ ಅನುದಾನ ಬೇಕು ಎಂದು ಬಾಲಚಂದ್ರ ನಾಯರ್ ಗಮನ ಸೆಳೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net