ಮಗುವಿನ ಪ್ರಾಣ ಉಳಿಸಲು ನೆರವಾಗಿ: ಸ್ತ್ರೀಶಕ್ತಿ ಸ್ವಸಹಾಯ ಸಂಘದ ಕಾರ್ಯಕರ್ತೆ ನಾಗರತ್ನಾ ಮನವಿ

Appeal for financial help to save the child life Mandya
Published on

ಮಂಡ್ಯ: ನಾಗಮಂಗಲ ತಾಲೂಕು ಚೀಣ್ಯ ಗ್ರಾಮದ ರೈತ ಕುಟುಂಬದಲ್ಲಿ ಜನಿಸಿದ ಮಗು ಸಿ.ಎಂ.ಪ್ರಯಾಶ್‌ಗೌಡ ಹುಟ್ಟಿನಿಂದ ಬೆಳವಣಿಗೆ ಕುಂಠಿತದಿಂದ ಬಳಲುತ್ತಿದ್ದು, ವೈದ್ಯೋಪಚಾರದ ನೆರವಿಗೆ ಸಹಾಯಾಸ್ತ ಚಾಚುವಂತೆ ಸ್ವರ್ಣಸಂದ್ರ ಸ್ತ್ರೀ ಶಕ್ತಿ ಸ್ವಸಹಾಯ ಸಂಘದ ಕಾರ್ಯಕರ್ತೆ ನಾಗರತ್ನಾ ಮನವಿ ಮಾಡಿದರು.

ಮಗುವಿನ ಬೆಳವಣಿಗೆ ಸಮಸ್ಯೆ ಕಂಡ ಮೈಸೂರಿನ ಕೊಲಂಬಿಯಾ ಏಷಿಯಾ ಆಸ್ಪತ್ರೆಗೆ ತೋರಿಸಲಾಗಿ, ಚುಚ್ಚುಮದ್ದಿನಿಂದ ಸಮಸ್ಯೆಗೆ ಪರಿಹಾರ ಸಿಗುವುದೆಂದು ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ನಿರಂತರವಾಗಿ ಚುಚ್ಚುಮದ್ದು ಕೊಡಿಸಲಾಗುತ್ತಿದೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಪ್ರಸ್ತುತ 10 ವರ್ಷದ ಬಾಲಕನಾಗಿರುವ ಪ್ರಯಾಶ್‌ಗೌಡನಿಗೆ 20 ವರ್ಷ ತುಂಬುವವರೆಗೂ ಪ್ರತಿನಿತ್ಯ ಚುಚ್ಚುಮದ್ದು ನೀಡುವಂತೆ ವೈದ್ಯರು ಸಲಹೆ ನೀಡಿದ್ದು, ಒಂದು ತಿಂಗಳಿಗಾಗುವ ಚುಚ್ಚುಮದ್ದು 11 ಸಾವಿರ ರೂ ಇದೆ. ಮಗುವಿನ ಆರೈಕೆ ಮಾಡುತ್ತಿರುವ ಹಾಲಹಳ್ಳಿ ಗ್ರಾಮದ ಅಜ್ಜಿ ಸರಿತಾ ಅವರಿಗೆ ಆರ್ಥಿಕ ಸಂಕಷ್ಟ ಎದುರಾಗಿದ್ದು, ಸಹಾಯಕ್ಕೆ ಮನವಿ ಮಾಡಿದ್ದಾರೆ ಎಂದು ಹೇಳಿದರು.

ಸರ್ಕಾರದ ಯಾವುದೇ ಆಸ್ಪತ್ರೆಯಲ್ಲಿ ಚುಚ್ಚುಮದ್ದು ದೊರೆಯದೇ ಇದ್ದು, ಹೊರದೇಶದಿಂದ ತರಿಸಲಾಗುತ್ತದೆ. ಬೆಂಗಳೂರಿನಲ್ಲಿ ಮಾತ್ರ ಲಭ್ಯವಿದ್ದು, ಸ್ವ ಸಹಾಯ ಸಂಘದಿಂದ 5 ತಿಂಗಳಿಗಾಗುವಷ್ಟು ಸಹಾಯ ಮಾಡಲಾಗಿದೆ. ಆದ್ದರಿಂದ ಜಿಲ್ಲೆಯ ಶಾಸಕರು, ಜನಪ್ರತಿನಿಧಿಗಳು ಹಾಗೂ ದಾನಿಗಳು ಸಹಾಯ ಮಾಡುವಂತೆ ಮನವಿ ಮಾಡಿದರು. ದಾನಿಗಳು ಮಗುವಿನ ಬ್ಯಾಂಕ್ ಖಾತೆ ಸಂಖ್ಯೆ: 12305100156240, ಐಎಫ್‌ಎಸ್‌ಸಿ ಕೋಡ್: ಪಿಕೆಜಿಬಿ0012305 ಗೆ ಸಹಾಯ ಮಾಡಲು ಕೋರಿದರು.

ಪ್ರಯಾಶ್‌ಗೌಡ, ಅಜ್ಜಿ ಸರಿತಾ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net