ಬೆಳೆ ಪರಿಹಾರ ಮಂಜೂರಿಗೆ ಮನವಿ

27 LXR 3
Published on

ಲಕ್ಷ್ಮೇಶ್ವರ: ಬೆಳೆ ವಿಮೆ, ಬೆಳೆ ಪರಿಹಾರ ಮಂಜೂರು ಮಾಡಲು ಆಗ್ರಹಿಸಿ ತಾಲೂಕು ಭಾರತೀಯ ಕಿಸಾನ್ ಸಂಘದಿಂದ ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಗುರುವಾರ ಮನವಿ ಸಲ್ಲಿಸಲಾಯಿತು.

ಸಂಘದ ತಾಲೂಕು ಅಧ್ಯಕ್ಷ ಅಜಯ ಕರೀಗೌಡ್ರ ಮಾತನಾಡಿ, ಕೊಳವೆ ಬಾವಿಗಳು ಬತ್ತಿ ಬೆಳೆ ಹಾನಿಯಾಗಿದೆ. ದೊಡ್ಡೂರು, ಸೂರಣಗಿ, ಉಳ್ಳಟ್ಟಿ, ಉಂಡೇನಹಳ್ಳಿ, ಶ್ಯಾಬಳ, ಶಿಗ್ಲಿ, ಗೋವನಾಳ, ಮುನಿಯನತಾಂಡಾ, ಸುವರ್ಣಗಿರಿ, ಅಡರಕಟ್ಟಿ, ಲಕ್ಷ್ಮೇಶ್ವರ, ಹರದಗಟ್ಟಿ, ಹಿರೇಮಲ್ಲಾಪುರ, ವಡೆಯರಮಲ್ಲಾಪುರ, ಗುಲಗಂಜಿಕೊಪ್ಪ, ರಾಮಗೇರಿ, ಯಳವತ್ತಿ, ಯತ್ತಿನಹಳ್ಳಿ, ಮಾಡಳ್ಳಿ ಗ್ರಾಮಗಳಲ್ಲಿನ ನೀರಾವರಿ ಜಮೀನುಗಳಲ್ಲಿರುವ ಕೊಳವೆಬಾವಿಗಳು ಬತ್ತಿವೆ. ಇದರಿಂದ ಶೇಂಗಾ, ಅಲಸಂದಿ, ಜೋಳ, ಗೋಧಿ ಬೆಳೆ ನಿರೀಕ್ಷಿತ ಪ್ರಮಾಣದಲ್ಲಿ ಬೆಳೆಯದೆ ರೈತರು ಹಾನಿ ಅನುಭವಿಸುವಂತಾಗಿದೆ. ಸರ್ಕಾರ ಬೆಳೆ ಪರಿಹಾರ, ಬೆಳೆ ವಿಮೆ ಮಂಜೂರು ಮಾಡಲು ಮುಂದಾಗಬೇಕು ಎಂದು ಆಗ್ರಹಿಸಿದರು.

ಸಂಘದ ತಾಲೂಕು ಕಾರ್ಯದರ್ಶಿ ಲಕ್ಷ್ಮಣ ಲಮಾಣಿ ಮಾತನಾಡಿದರು. ಗಂಗಾಧರ ಬಂಕಾಪುರ, ಸುರೇಶ ಬಾಗಲದ, ಅಲ್ತಾಫ ನೂರಬೇಗಮಿರಜ, ದಾದಾಪೀರ ನೂರಬೇಗಮಿರಜ, ಮಲ್ಲಿಕಾರ್ಜುನ ಗೊರವರ, ರಾಮಪ್ಪ ಲಮಾಣಿ, ನಿಂಗನಗೌಡ್ರ ಪಾಟೀಲ, ರಮೇಶ ಹುಲಕೋಟಿ, ರಮೇಶ ಕೋಳಿವಾಡ, ಮಹಾಲಿಂಗಪ್ಪ ನಾದಿಗಟ್ಟಿ, ಶಿವಮೂರ್ತೆಪ್ಪ ಈಳಿಗೇರ, ಚಂದ್ರಗೌಡ ಕರೇಗೌಡ್ರ, ವಸಂತಗೌಡ್ರ ಕರೆಗೌಡ್ರ, ಮುತ್ಯಾರ ನೂರಮಿರ್ಜಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net